fbpx
ಸಮಾಚಾರ

ಬ್ಯುಸಿ ಶೆಡ್ಯೂಲ್​ ನಡುವೆಯೂ ಕಬಡ್ಡಿ ಆಡಿದ ನಿಖಿಲ್​ ಕುಮಾರ್: ವಿಡಿಯೋ ವೈರಲ್

ನಟ ಕಮ್ ರಾಜಕಾರಣಿ ನಿಖಿಲ್ ಕುಮಾರ್ ಸದಾ ತಮ್ಮ ರಾಜಕೀಯ ಮತ್ತು ಸಿನಿಮಾ ಜೇವನದಲ್ಲಿ ಬ್ಯುಸಿಯಿರುತ್ತಾರೆ. ಸಿನಿಮಾ ಶೂಟಿಂಗ್, ಪಕ್ಷದ ಸಮಾವೇಶ ಹೇಗೆ ಸಿಕ್ಕಾಪಟೆ ಶೆಡ್ಯೂಲ್ ನಡುವೆಯೂ ನಿಖಿಲ್ ಅವರು ಎಲ್ಲರ ಜೊತೆಗೂಡಿ ಕಬ್ಬಡ್ಡಿ ಆಡಿದ್ದಾರೆ. ನಿಖಿಲ್ ಅವರು ಕಬ್ಬಡ್ಡಿ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೇ ವೈರಲ್ ಆಗಿದೆ.

 

 

ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡರಸಿನಕೆರೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಅವರ ಪರವಾಗಿ ಪ್ರಚಾರ ನಡೆಸಿದ ನಿಖಿಲ್ ಕುಮಾರಸ್ವಾಮಿ, ಇದೇ ವೇಳೆ ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಅಖಾಡಕ್ಕೆ ಇಳಿದು ಕಬಡ್ಡಿ ಸಹ ಆಡಿದರು. ನಿಖಿಲ್ ಕುಮಾರಸ್ವಾಮಿ ಕಬಡ್ಡಿ ಆಡುತ್ತಿರುವ ಚಿತ್ರಗಳು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿವೆ.

ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾದ ಬಳಿಕ ಇನ್ನಾವ ಸಿನಿಮಾಗಳು ತೆರೆಗೆ ಬಂದಿಲ್ಲ. ಇದೀಗ ‘ರೈಡರ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾವು ಡಿಸೆಂಬರ್ 24ರಂದು ಬಿಡುಗಡೆ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top