fbpx
ಸಮಾಚಾರ

ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಜಿಯೋದ ಅನ್‍ಲಿಮಿಟೆಡ್ ಪ್ರೀಪೇಯ್ಡ್ ಯೋಜನೆಗಳು ದುಬಾರಿಯಾಗಲಿದ್ದು ಪ್ಲಾನ್ ನೋಡಿದರೆ ಯೋಜನೆ ಯಲ್ಲಿ ರೂ 999 ಪ್ಲಾನ್ ನಲ್ಲಿ ಲಭ್ಯವಿದೆ. ಆದರೆ ಅದರಲ್ಲಿ ಜಿಯೋ ಕಡಿಮೆ ಡೇಟಾವನ್ನು 84 ದಿನಗಳು ನೀಡುತ್ತಿದೆ. ಯೋಜನೆಯಲ್ಲಿ ದಿನಕ್ಕೆ 3 ಜಿಬಿ ಡೇಟಾ ಲಭ್ಯವಿದೆ. ಅಂದರೆ ಒಟ್ಟು 252 ಜಿಬಿ ಡೇಟಾ. ಯಾವುದೇ ನೆಟ್ವರ್ಕ್ನಲ್ಲಿ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯವಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕೂಡಾ ಪ್ರಿಪೇಯ್ಡ್ ಯೋಜನೆಯಲ್ಲಿ 25%ದಷ್ಟು ಹೆಚ್ಚಳವನ್ನು ಮಾಡಿದೆ, ಈಗಾಗಲೇ ಅದು ಜಾರಿಗೆ ಬಂದಿದೆ. ಈಗ ಜಿಯೋ ಪ್ರಿಪೇಯ್ಡ್ ಪ್ಯಾಕ್‍ಗಳ ಬೆಲೆಯನ್ನು 20% ಏರಿಕೆ ಮಾಡುವುದಾಗಿ ತಿಳಿಸಿದೆ.

75 ರೂ. ಇದ್ದ ಪ್ಯಾಕ್ ಬೆಲೆ 91 ರೂ.ಗೆ ಏರಿಕೆಯಾಗಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನ್‍ಲಿಮಿಟೆಡ್ ಕರೆ ಹಾಗೂ 50 ಎಸ್‍ಎಂಎಸ್ ನೊಂದಿಗೆ ತಿಂಗಳಿಗೆ 3ಜಿಬಿ ಡೇಟಾವನ್ನು ನೀಡುತ್ತದೆ. 24 ದಿನಗಳ ವ್ಯಾಲಿಡಿಟಿಯ ಯೋಜನೆ ಈ ಹಿಂದೆ 149 ರೂ. ಇದ್ದು, 179 ರೂ.ಗೆ ಏರಿಕೆಯಾಗಿದೆ. ಇದರಲ್ಲಿ 1ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ.

28 ದಿನಗಳ ಪ್ಯಾಕ್: 129 ರೂ.ಯ ಪ್ಯಾಕ್ ಅನ್ನು 155 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 300 ಎಸ್‍ಎಂಎಸ್ ಉಚಿತವಾಗಿ ಇದೆ. 199 ರೂ.ಯ ಯೋಜನೆ 239 ರೂ.ಯಾಗಿದೆ. ಇದರಲ್ಲಿ 1.5ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ಇದೆ. 249 ರೂ.ಯ ಯೋಜನೆ 299 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ಸಿಗುತ್ತದೆ.

84 ದಿನಗಳ ಪ್ಯಾಕ್: 329 ರೂ., 555 ರೂ. ಹಾಗೂ 599 ರೂ. ಇದ್ದ ಪ್ಯಾಕ್‌ಗಳು ಕ್ರಮವಾಗಿ 395 ರೂ., 666 ರೂ. ಹಾಗೂ 719 ರೂ.ಗಳಿಗೆ ಏರಿಕೆಯಾಗಿದೆ. ಈ ಮೂರೂ ಯೋಜನೆಗಳು ಅನ್‍ಲಿಮಿಟೆಡ್ ಕರೆ, 100 ಎಸ್‍ಎಮ್‍ಎಸ್‍ಗಳನ್ನು ಉಚಿತವಾಗಿ ನೀಡುವುದರೊಂದಿಗೆ ಕ್ರಮವಾಗಿ 6ಜಿಬಿ ಡೇಟಾ, 1.5ಜಿಬಿ ದೈನಂದಿನ ಡೇಟಾ ಹಾಗೂ 2ಜಿಬಿ ದೈನಂದಿನ ಡೇಟಾವನ್ನು ನೀಡುತ್ತದೆ.

336 ದಿನಗಳ ಯೋಜನೆ 1,299 ರೂ.ಯಿಂದ 1,559 ರೂ.ಗೆ ಏರಿಕೆಯಾಗಿದೆ. 24 ಜಿಬಿ ಡೇಟಾ ಹಾಗೂ 3,600 ಎಸ್‍ಎಂಎಸ್‍ಗಳನ್ನು ಉಚಿತವಾಗಿ ಇದು ನೀಡುತ್ತದೆ. ಈ ಹಿಂದೆ ಇದ್ದ ವಾರ್ಷಿಕ ಯೋಜನೆಗೆ 2,399 ರೂ. ಇದ್ದರೆ ಈಗ 2,879 ರೂ.ಗೆ ಏರಿಕೆಯಾಗಿದೆ. ಇದು ದೈನಂದಿನ 2ಜಿಬಿ ಡೇಟಾ ಅನ್‍ಲಿಮಿಟೆಡ್ ಕರೆ, ದಿನಕ್ಕೆ 100 ಎಸ್‍ಎಮ್‍ಎಸ್ ಹಾಗೂ 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಜಿಯೋ ಡೇಟಾ ಆಡ್-ಆನ್ ಪ್ರೀಪೇಯ್ಡ್ ಯೋಜನೆಯನ್ನೂ ಹೆಚ್ಚಿಸಲಿದ್ದು, ಇದು 51 ರೂ. ಪ್ಲ್ಯಾನ್ 61 ರೂ.ಗೆ, 101 ಪ್ಲ್ಯಾನ್ 121 ರೂ.ಗೆ ಹಾಗೂ 251 ರೂ.ಪ್ಲ್ಯಾನ್ 301 ರೂ.ಗೆ ಏರಿಕೆಯಾಗಿದೆ. ಈ ಪ್ಲ್ಯಾನ್‍ಗಳು ಕ್ರಮವಾಗಿ 6ಜಿಬಿ, 12ಜಿಬಿ ಮತ್ತು 50ಜಿಬಿ ಡೇಟಾವನ್ನು ನೀಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top