fbpx
ಸಮಾಚಾರ

“ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..:” ರಾಹುಲ್ ಬಗ್ಗೆ ಪಂಜಾಬ್ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು ಗೊತ್ತಾ?

ಐಪಿಎಲ್ 2022ರ(IPL 2022) ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಅದರ ಮೊದಲ ಹಂತವಾಗಿ ಆಟಗಾರರ ರಿಟೆನ್ಶನ್ ಪ್ರಕ್ರಿಯೆ ನೆನ್ನೆಯಷ್ಟೇ ಮುಗಿದಿದ್ದು ಆಯಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನೆಲ್ಲಾ ಬಿಡುಗಡೆ ಮಾಡಿವೆ. ಬಿಡುಗಡೆಗೊಂಡ ಆಟಗಾರರು ಮೆಗಾ ಹರಾಜಿನಲ್ಲಿ ಬೇರೆ ಬೇರೆ ತಂಡಗಳಿಗೆ ಸೇರುತ್ತಾರೆ.

ಕೆಲ ತಂಡಗಳು ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದ್ದು ಕ್ರಿಕೆಟ್ ಪ್ರೇಮಿಗಳ ಆಚರಿಗೆ ಕಾರಣವಾಗಿದೆ. ಅದೇ ರೀತಿ ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಮತ್ತು ಅರ್ಶ್ ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ನ ನಾಯಕ ಕೆ.ಎಲ್.ರಾಹುಲ್ ರನ್ನು ಫ್ರಾಂಚೈಸಿ ಉಳಿಸಿಕೊಂಡಿಲ್ಲ.

ಟಿ20 ಸ್ಪೆಶಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ರಾಹುಲ್ ಅವರನ್ನು ಕೈಬಿಟ್ಟಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಈ ಬಗ್ಗೆ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದಾರೆ.,” ನಾವು ಕೆ.ಎಲ್.ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಅದಕ್ಕಾಗಿಯೇ ಅವರನ್ನು ನಾವು ನಾಯಕರನ್ನಾಗಿ ಮಾಡಿದ್ದೆವು. ಆದರೆ ಅವರು ತಂಡದಲ್ಲಿ ಉಳಿಯಲು ಬಯಸಿಲ್ಲ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ” ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top