fbpx
ಮಾಹಿತಿ

ದೇಶದಲ್ಲಿ 547 ದಿನಗಳಲ್ಲೇ ಅತಿ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ದಾಖಲು.

ಭಾರತದಲ್ಲಿ ಹೊಸದಾಗಿ 8954 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟಾರೆ ಪ್ರಕರಣಗಳ ಸಂಖ್ಯೆ 3,45,96,776ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ತಾಜಾ ಮಾಹಿತಿಯಲ್ಲಿ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 547 ದಿನಗಳ ಬಳಿಕ ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 267 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತರ ಪ್ರಮಾಣ 4,69,247ಕ್ಕೆ ತಲುಪಿದೆ ಎಂದು ಇಂದು ಬೆಳಗ್ಗೆ 8 ಗಂಟೆಗೆ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಿ 279 ದಿನಗಳು ಕಳೆದಿವೆ. ಈವರೆಗೂ 86 ದಿನ 10 ಸಾವಿರಕ್ಕಿಂತ ಕಡಿಮೆ ಡೋಸ್ ಲಸಿಕೆ ನೀಡಿದರೆ, 46 ದಿನ 10 ರಿಂದ 20 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. ಅದೇ ರೀತಿ 28 ದಿನ 20 ರಿಂದ 30 ಡೋಸ್, 24 ದಿನಗಳವರೆಗೆ 30 ರಿಂದ 40 ಸಾವಿರ ಡೋಸ್, 19 ದಿನಗಳಲ್ಲಿ 40 ರಿಂದ 50 ಡೋಸ್ ಹಾಗೂ 19 ದಿನಗಳಲ್ಲಿ 50 ರಿಂದ 60 ಸಾವಿರ ಡೋಸ್ ಲಸಿಕೆ ನೀಡಲಾಗಿದೆ.

ಅದೇ ರೀತಿ 13 ದಿನಗಳಲ್ಲಿ 60 ರಿಂದ 70 ಸಾವಿರ ಡೋಸ್, 11 ದಿನಗಳಲ್ಲಿ 70 ರಿಂದ 80 ಸಾವಿರ ಡೋಸ್ ಮತ್ತು 14 ದಿನ 80 ರಿಂದ 90 ಸಾವಿರ ಡೋಸ್ ಲಸಿಕೆ ವಿತರಿಸಿದರೆ, 19 ದಿನಗಳಲ್ಲಿ 90 ರಿಂದ 1 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಆ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತವು ಹೊಸ ದಾಖಲೆ ಬರೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top