fbpx
ಕ್ರಿಕೆಟ್

ಐಪಿಎಲ್ ನ ಹರಾಜು ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ.

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಹೇಳಿದರು. ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕ ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಅನ್ರಿಚ್ ನಾರ್ಜೆ ಅವರನ್ನು ಉಳಿಸಿಕೊಂಡಿತು. ಆದರೆ ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್, ಶಿಖರ್ ಧವನ್ ಮತ್ತು ಆರ್ ಅಶ್ವಿನ್ ರನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಹರಾಜು ಪ್ರಕ್ರಿಯೆ ಬಗ್ಗೆ ಜಿಂದಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡ ಮತ್ತು ಆರ್.ಅಶ್ವಿನ್ ಅವರನ್ನು ತಂಡದ ಸೇವೆಯಿಂದ ಕಳೆದುಕೊಂಡಿರುವುದು ಬೇಸರದ ಸಂಗತಿ” ಎಂದು ಜಿಂದಾಲ್ ಮಂಗಳವಾರ ಹೇಳಿದ್ದಾರೆ. ಯುವಕರಿಗೆ ಅವಕಾಶ ನೀಡಿ ನೀವು ತಂಡವನ್ನು ಕಟ್ಟುವುದು, ಅವರನ್ನು ಬೆಳೆಸುವುದುದು ಮತ್ತು ಮೂರು ವರ್ಷಗಳ ನಂತರ ನೀವು ಅವರನ್ನು ಕಳೆದುಕೊಳ್ಳುವುದು. ಇದು ನ್ಯಾಯವಲ್ಲ. ಐಪಿಎಲ್ ಅನ್ನು ಮರುಪರಿಶೀಲಿಸುವ ಅಗತ್ಯವಿದೆ” ಎಂದು ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಹೇಳಿದ್ದಾರೆ.

2022ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಲಾ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ತಿಳಿಸಿತ್ತು. ಅದು ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಬಹುದೆಂದು ನಿಯಮದಲ್ಲಿ ತಿಳಿಸಿತ್ತು . ಹೀಗಾಗಿ ಡೆಲ್ಲಿ ಅಶ್ವಿನ್ ಮತ್ತು ಅಯ್ಯರ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top