fbpx
ಸಮಾಚಾರ

ಅರುಣ್​ ಸಾಗರ್​ಗೆ ಬಂಪರ್​ ಆಫರ್: ರಾಜಮೌಳಿ ಸಿನಿಮಾದಲ್ಲಿ ಕನ್ನಡದ ನಟ ನಟನೆ

ತೆಲುಗು ಚಿತ್ರರಂಗದ ಸೋಲಿಲ್ಲದ ಸರದಾರ ಎಂದೇ ಹೆಸರುವಾಸಿಯಾಗಿರುವ ‘ಮಗಧೀರ’, ‘ಈಗ’, ‘ಬಾಹುಬಲಿ’, ಅಂತಹ ದೊಡ್ಡ ಯಶಸ್ವಿ ಚಿತ್ರಗಳನ್ನ ಕೊಟ್ಟ ನಿರ್ದೇಶಕ ರಾಜಮೌಳಿ ಈವರೆಗೂ ಮಾಡಿರುವ ಚಿತ್ರಗಳೆಲ್ಲವೂ ಬ್ಲಾಕ್ ಬ್ಲಾಸ್ಟರ್ ಹಿಟ್ ಆಗಿವೆ. ಇಂಥಾ ರಾಜಮೌಳಿ ಅವರ ಮುಂದಿನ ಚಿತ್ರ ‘RRR’ ಬಗೆಗೆ ಕುತೂಹಲ ಬೆಟ್ಟಮಾಡಿದೆ.

 

 

ಮಲ್ಟಿ ಸ್ಟಾರರ್ ಚಿತ್ರವಾಗಿರುವ “RRR” ನಲ್ಲಿ ರಾಮಚರಣ್ ಮತ್ತು ಜೂ.ಎಂಟಿಆರ್ ಅವರ ಮುಖ್ಯ ಭೂಮಿಕೆಯಿದ್ದು ಬಾಲಿವುಡ್ ನಟಿ ಅಲಿಯಾ ಭಟ್, ಅಜಯ್ ದೇವಗನ್, ಸ್ರೇಯ ಶರಣ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಯ ನಟ-ನಟಿಯರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಆದ್ರೆ ಕನ್ನಡದಿಂದ ಯಾರೂ ಈ ಸಿನಿಮಾಲ್ಲಿ ನಟಿಸಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಇತ್ತು. ಈಗ ವಿಚಾರ ಏನಪ್ಪಾ ಅಂದ್ರೆ ಈ “RRR” ಚಿತ್ರದಲ್ಲಿ ಕನ್ನಡದ ಖ್ಯಾತ ನಟರೊಬ್ಬರೂ ನಟಿಸಿದ್ದಾರಂತೆ. ಹಾಗಾದ್ರೆ ಯಾರಪ್ಪ ಆ ನಟ ಅಂತೀರಾ? ಮುಂದೆ ಓದಿ

“RRR” ನಲ್ಲಿ ಅರುಣ್ ಸಾಗರ್:
ಹೌದು, “RRR” ನಲ್ಲಿ ನಟಿಸಿರುವ ಕನ್ನಡ ನಟ ಮತ್ಯಾರು ಅಲ್ಲ, ಅದು ಬಹುಮುಖ ಪ್ರತಿಭೆ ಅರುಣ್ ಸಾಗರ್. ಹೌದು, “RRR” ನ ಸಣ್ಣ ಪಾತ್ರವೊಂದರಲ್ಲಿ ನಟ ಅರುಣ್ ಸಾಗರ್ ಅವರು ಕಾಣಿಸಿಕೊಂಡಿದ್ದಾರಂತೆ ಹೀಗಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಸಿನಿಮಾ ಪ್ರಾರಂಭದಲ್ಲೇ ಅರುಣ್ ಸಾಗರ್ ಕಾಣಿಸಿಕೊಳ್ಳಲಿದ್ದಾರಂತೆ. ಆದ್ರೆ ಈ ವಿಷಯವನ್ನು ರಾಜ ಮೌಳಿ ಎಲ್ಲೂ ಬಾಯಿ ಬಿಟ್ಟಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top