fbpx
ಸಮಾಚಾರ

ಬಿಗ್ ಬಾಸ್ ದಿವ್ಯಾ ಉರುಡುಗಗೆ ಜ್ಯಾಕ್ ಪಾಟ್: ಯೋಗರಾಜ್ ಭಟ್ ಸಿನಿಮಾದಲ್ಲಿ ಅವಕಾಶ

ಬಿಗ್ ಬಾಸ್ ಕನ್ನಡ ಸೀಸನ್ 8 ರ ಟಾಪ್ 3 ಸ್ಪರ್ದಿಯಾಗಿ ಗಮನ ಸೆಳೆದಿದ್ದ ಕರಾವಳಿ ಚೆಲುವೆ ದಿವ್ಯಾ ಉರುಡುಗ ಬಿಗ್ ಬಾಸ್ ಮುಗಿದ ಮೇಲೆ ಹೆಚ್ಚು ಸುದ್ದಿಯಾಗಿರಲಿಲ್ಲ. ಯಾವುದೇ ಷೋ, ಸಿನಿಮಾದಲ್ಲಿಯೂ ದಿವ್ಯಾ ಕಾಣಿಸಿರಲಿಲ್ಲ. ದಿವ್ಯಾ ಎಲ್ಲಿ ಕಾಣೆಯಾಗಿದ್ದಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಈ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ನಿರ್ದೇಶಕ ಯೋಗರಾಜ್​ ಭಟ್​ ಅವರ ಸಿನಿಮಾದಲ್ಲಿ ನಟಿಸೋ ಅವಕಾಶವನ್ನು ಅವರು ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರ ಕೇಳಿ ದಿವ್ಯಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲ್ಮ್ಸ್​ ಜಂಟಿ ನಿರ್ಮಾಣದಲ್ಲಿ ‘ಪದವಿಪೂರ್ವ’ ಸಿನಿಮಾ ಮೂಡಿ ಬರುತ್ತಿದೆ. ಹರಿಪ್ರಸಾದ್ ಜಯಣ್ಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಪ್ರವೇಶ ಪಡೆದುಕೊಂಡಿದ್ದಾರೆ.

ಚಿತ್ರದಲ್ಲಿ ದಿವ್ಯಾ ಉರುದುಗ ಅತಿಥಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಯೋಗರಾಜ್​ ಭಟ್​ ಅವರ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ದಿವ್ಯಾ ಖುಷಿ ಪಟ್ಟಿದ್ದಾರೆ. ದಿವ್ಯಾ ಅವರು ನಟಿಸಲಿರುವ ಕಥೆಯ ಚಿತ್ರೀಕರಣ ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ನಡೆಯಲಿದೆ. ಈಗಾಗಲೇ ನಾಲ್ಕು ಹಂತದಲ್ಲಿ ಶೂಟಿಂಗ್​ ಮುಗಿದಿದ್ದು, ಐದನೇ ಹಂತದ ಚಿತ್ರೀಕರಣಕ್ಕೆ ತಂಡ ಸಕಲ ಸಿದ್ಧತೆ ನಡೆಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top