fbpx
ಸಮಾಚಾರ

ಜನರಿಗೆ ಸಂವಿಧಾನ ಬಗ್ಗೆ ಪಾಠ ಮಾಡಿದ ಹಂಸಲೇಖ.

ಕನ್ನಡ ಚಿತ್ರರಂಗದ ದೈತ್ಯ ದೇಸಿಪ್ರತಿಭೆ ನಾದಬ್ರಹ್ಮ ಹಂಸಲೇಖ ಅವರು ದಲಿತರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ, ಸಮಾಜದಲ್ಲಿನ ಜಾಲಾತಿದೋರಣೆಗಳ ವಿಚಾರವಾಗಿ ನೀಡಿದ್ದ ಹೇಳಿಕೆ ಸಮಾಜದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಈ ವಿಚಾರವಾಗಿ ವಿರೋಧಿಗಳು ನಾದಬ್ರಹ್ಮನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಸದ್ಯ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಹಂಸಲೇಖಾರಿಗೆ ರಿಲೀಫ್ ಸಿಕ್ಕಿದ್ದು ವಿವಾದ ಬಹುತೇಕ ತಣ್ಣಗಾಗಿದೆ.

ಈ ಮದ್ಯೆ ಹಂಸಲೇಖ ಅವರು ಜನರಿಗೆ ಸಂವಿಧಾನದ ಪಾಠವನ್ನು ಬೋಧಿಸಿದ್ದಾರೆ. ‘ಭಾರತದ ಬೃಹತ್ ಸಂವಿಧಾನ’ ಎಂದು ಹಾಡು ಮೂಲಕ ರಚಿಸಿದ್ದಾರೆ. ಈ ಹಾಡನ್ನು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂವಿಧಾನದ ಬಗ್ಗೆ ಹಂಸಲೇಖ ಬರೆದ ಸಾಲುಗಳು ಇಂತಿವೆ.

‘ ನಾನು:

ನೀನು:

ನಮಗಾಗಿರೋದೇ ಕಾನೂನು,

ನಾವು:

ನೀವು:

ಎಲ್ಲರೂ ಇದರಲ್ಲಿ ಕೂಡೆವು,

ಕೂಡೆವು:

ಬಾಳೆವು:

ಬಂಧುತ್ವವನು ಕಟ್ಟೇವು

ಜೀವನ ವಿಧಾನ ಯಾನ:

ವಿದ್ಯಾ ಪ್ರಧಾನ ಗಾನ:

ಬೃಹತ್ ಭಾರತದ ಬೃಹತ್ ಸಂವಿಧಾನ!

ಓ ಬಡವರ ಗೀತೆ,

ನೀ ಬಹುಜನ ಜಾತೆ!

ಅಕ್ಷರ ರೂಪದ

ಶಾಂತಿಯ ಧನಿಯ :

ಪ್ರಜಾಪ್ರಭುತ್ವದ institution

ವಂದೇ ಇಂಡಿಯನ್ constitution’.

ಹಂಸಲೇಖ ಅವರು ಸಂವಿಧಾನದ ಬಗ್ಗೆ ಬರೆದಿದ್ದ. ಈ ಸಾಲುಗಳನ್ನು ತಮ್ಮ ಫೇಸ್‌ಬುಕ್ ಅಕೌಂಟ್ ನಲ್ಲಿ  ತಾವೇ ಧ್ವನಿಯನ್ನು  ನೀಡಿ ಶೇರ್ ಮಾಡಿಕೊಂಡಿದ್ದಾರೆ. ಈ ಸಾಲುಗಳು ಈಗ ವೈರಲ್ ಆಗುತ್ತಿದ್ದು, ಎರಡು ದಿನಗಳ ಹಿಂದೆ ರಚಿಸಿದ ಈ ಹಾಡು  ಬಗ್ಗೆ ಚರ್ಚೆಯಾಗುತ್ತಿದೆ. ನವೆಂಬರ್ 26ರಂದು ‘ಸಂವಿಧಾನ ದಿವಸ’ವನ್ನು ಆಚರಿಸಲಾಗಿದೆ. ಇದರ ನೆನಪಿಗಾಗಿ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಹಾಡು  ರಚಿಸಿದ್ದಾರೆ ಎಂದು ಹೇಳಲಾಗಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top