fbpx
ಕ್ರೈಂ ಸ್ಟೋರಿ

ಎಸಿಬಿ ದಾಳಿಗೆ ಒಳಗಾಗಿದ್ದ ಕೆಎಎಸ್ ಅಧಿಕಾರಿ ನಾಗರಾಜ್ ಅವರ ಪತ್ನಿ ವಿಧಿವಶ

ಇತ್ತೀಚಿಗಷ್ಟೇ ಎಸಿಬಿ ದಾಳಿಗೆ ಒಳಗಾಗಿದ್ದ ಕೆಎಎಸ್ ಅಧಿಕಾರಿ ನಾಗರಾಜ್ ಅವರ ಪತ್ನಿ ನಾಗರತ್ನಮ್ಮ ನಿಧನಹೊಂದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಸಿಬಿ ದಾಳಿಯ ಬಗ್ಗೆ ಚಿಂತೆಯಲಿದ್ದ ನಾಗರತ್ನಮ್ಮ ಅವರಿಗೆ ಇಂದು ತೀವ್ರ ಹಾರ್ಟ್ ಅಟ್ಯಾಕ್ ಆಗಿ ಕೊನೆಯುಸಿರೆಳೆದಿದ್ದಾರೆ.

ಹೃದಯವಾಘಾತವಾದಾಗ ತಕ್ಷಣ ನಾಗರತ್ನಮ್ಮ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರಗೆ ಕರೆದೊಯ್ಯಲಾಯಿತು. ಅವರನ್ನು ಉಳಿಸಲು ಡಾಕ್ಟರ್ಸ್ ತುಂಬ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ೧೧ ಹಂಟೆಯ ಸರಿಸುಮಾರು ಸಾವನ್ನಪ್ಪಿದ್ದಾರೆ.

ಐಎಂಎ ಪ್ರಕರಣದ ಆರೋಪಿಯೂ ಆಗಿರುವ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಅವರ ನಿವಾಸದ ಮೇಲೆ ಎರಡು ದಿನದ ಹಿಂದೆಯಷ್ಟೇ ಎಸಿಬಿ ಅಧಿಕಾರಿಗಳು ದಾಳಿ ನೆಡೆಸಿದ್ದರು. ಈ ವೇಳೆ ಎಲ್ ಸಿ ನಾಗರಾಜ್ ಅವರಿಗೆ ಸಂಬಂಧಿಸಿದ ಎಲ್ಲಾ ನಗದು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವಿಚಾರ ಮಾದ್ಯಮಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಎಲ್ಲಾ ಕಾರಣಗಳಿಂದ ನಾಗರತ್ನಮ್ಮ ಅವರು ಮಾನಸಿಕವಾಗಿ ನೊಂದಿದ್ದರು ಅದರಿಂದ ಅವರ ಅರೋಗ್ಯ ಮೇಲೂ ಪರಿಣಾಮ ಬೀರಿತ್ತು ಎಂದು ಅವರ ಕುಟುಂಬದ ಆಪ್ತರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top