fbpx
ಕ್ರಿಕೆಟ್

ವೆಂಕಟೇಶ್ ಅಯ್ಯರ್ ಒಂದೇ ವರ್ಷದಲ್ಲಿ ಸಂಬಳವನ್ನು ಹೈಕ್ ಮಾಡಿ ಸಾಧನೆ ಮಾಡಿದರು.

ಐಪಿಎಲ್‍ನಲ್ಲಿ ಅದೇಷ್ಟೋ ಮಂದಿ ಆಟಗಾರರು ರಾತ್ರೋ ರಾತ್ರಿ ಬೆಳಕಿಗೆ ಬಂದಿದ್ದಾರೆ. ಪ್ರತೀ ಐಪಿಎಲ್ ಆವೃತ್ತಿಯಲ್ಲೂ ಕೆಲವರಾದರೂ ಹೊಸ ಪ್ರತಿಭೆಗಳು ಅನಾವರಣಗೊಳ್ಳುತ್ತಾರೆ. ಈ ಬಾರಿಯ ಐಪಿಎಲ್​ನ ದುಬೈ ಆವೃತ್ತಿಯಲ್ಲಿ ಗುರುತಿಸಿಕೊಂಡು, ಹೆಸರು ಮಾಡಿದ ಆಟಗಾರ ವೆಂಕಟೇಶ್ ಅಯ್ಯರ್.

ಈಗಾಗಲೇ 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ಕೆಲ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ ವೆಂಕಟೇಶ್ ಅಯ್ಯರ್ 20 ಲಕ್ಷ ರೂಪಾಯಿಗೆ ತಂಡಕ್ಕೆ ಸೇರಿದ್ದ ಇವರು ಇದೀಗ ರಿಟೈನ್‍ನಲ್ಲಿ ಒಟ್ಟು 8 ಕೋಟಿ ಪಡೆದಿದ್ದಾರೆ. ಒಂದೇ ವರ್ಷದಲ್ಲಿ 4000% ಸಂಬಳದಲ್ಲಿ ಏರಿಕೆಯಾಗಿ ಈ ಮೂಲಕ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾರೆ.

ಅಯ್ಯರ್ ಐಪಿಎಲ್ ನಲ್ಲಿ ಮಿಂಚಿದ್ದಲ್ಲದೆ ಟೀಂ ಇಂಡಿಯಾಗೆ ಆಯ್ಕೆಯಾಗಿ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿ ತಮ್ಮ ಚಾಪ್ಅನ್ನು ಮೂಡಿಸಿದ್ದಾರೆ. ಇದೀಗ ಟೀಂ ಇಂಡಿಯಾದ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅಯ್ಯರ್ ಇನ್ನಷ್ಟೂ ಉತ್ತಮ ಆಟದ ಮೂಲಕ ಮಿಂಚಲಿ ಎಂದು ಅಭಿಮಾನಿಗಳ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top