fbpx
ಮಾಹಿತಿ

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮತ್ತೊಂದು ಸ್ಟ್ಯಾಂಡ್ ಅಪ್ ಶೋ ರದ್ದು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಶೋ ನಡೆಯಬೇಕಿದ್ದ ಕುನಾಲ್ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಂಡಿದೆ. ಮುನ್ನಾವರ್ ಫರುಕಿ ಅವರಿಗೆ ನಗರದಲ್ಲಿ ಪ್ರದರ್ಶನ ನೀಡಲು ಅನುಮತಿಯನ್ನು ನಿರಾಕರಿಸಿದ ಕೆಲವೇ ದಿನಗಳಲ್ಲಿ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಂಡಿದೆ. ಈ ಹಿಂದೆ ಹಲವು ವಿಷಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿರುವ ಕಮ್ರಾ ನಗರದಲ್ಲಿ ನಡೆಯಲಿದ್ದ ತನ್ನ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಬಗ್ಗೆ ತನ್ನ ಅನುಯಾಯಿಗಳು ಮತ್ತು ವಿರೋಧಿಗಳಿಗೆ ತಿಳಿಸಲು ಟ್ವಿಟ್ಟರ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿಗರಿಗೆ ನಮಸ್ಕಾರಗಳು. ಮುಂದಿನ 20 ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ನನ್ನ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ಬಹಳ ಸಂತೋಷವಾಗಿದೆ. ಎರಡು ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆ ಎರಡು ಕಾರಣ ಏನು ಅಂತ ಹೇಳಿರುವ ಕುನಾಲ್, ಹೆಚ್ಚು ಕುಳಿತುಕೊಳ್ಳಬಹುದಾದ ಸಿನಿಮಾ ಚಿತ್ರ ಮಂದಿರ ಸ್ಥಳದಲ್ಲಿ 45 ಜನರನ್ನು ಕೂರಿಸಲು ನಾವು ಅನುಮತಿಯನ್ನು ಪಡೆದಿಲ್ಲ. ಎರಡನೆಯದಾಗಿ ಅಲ್ಲಿ ನಾವು ಏನಾದರೂ ಪ್ರದರ್ಶನವನ್ನು ಕೊಡೋ ಹಾಗೆ ಇಲ್ಲ ಎಂದು ಬೆದರಿಕೆ ಕೂಡ ಹಾಕಲಾಗಿದೆ. ಇದು ಸಹ ಕೋವಿಡ್‌ ನಿಂದ ಆಗಿ ಎಂದು ಭಾವಿಸುತ್ತೇನೆ. ಕೋವಿಡ್ ಪ್ರೋಟೋಕಾಲ್ ಮತ್ತು ನೂತನ ಮಾರ್ಗಸೂಚಿಗಳನ್ನು ವೈರಸ್‌ನ ರೂಪಾಂತರದಂತೆ ನೋಡುತ್ತಿರುವುದಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಇವರ ಟ್ವೀಟ್‌ನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್ ಕುನಾಲ್ ಕಮ್ರಾ ಹಾಗೂ ಕಾರ್ಟೂನಿಸ್ಟ್‌ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್ ಕೂಡ ಜಾರಿ ಮಾಡಿತ್ತು. ಅದು ಅಲ್ಲದೇ ನೊಟೀಸ್‌ಗೆ ಆರು ವಾರಗಳಲ್ಲಿ ಉತ್ತರಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಇದೀಗ ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ನೊಟೀಸ್‌ಗೆ ಉತ್ತರಿಸಿದ್ದು ಸುಪ್ರೀಂಕೋರ್ಟ್ ಕ್ಷಮೆ ಕೋರಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top