fbpx
ಸಮಾಚಾರ

ಜನವರಿ 1 ರಿಂದ ಎಟಿಎಂ ಶುಲ್ಕದಲ್ಲಿ ಹೆಚ್ಚಳ

ನೀವು ಎಟಿಎಂನಿಂದ ತಿಂಗಳಿಗೆ ಇಂತಿಷ್ಟು ಬಾರಿ ಮಾತ್ರ ನೀವು ಯಾವುದೇ ಶುಲ್ಕ ಇಲ್ಲದೇ ಹಣ ವಿತ್ ಡ್ರಾ ಮಾಡಬಹುದು ಅಥವಾ ಬೇರೆ ಸೇವೆ ಪಡೆದುಕೊಳ್ಳಬಹುದು. ಅದನ್ನ ಮೀರಿ ಹೆಚ್ಚು ಬಾರಿ ನೀವು ವಹಿವಾಟು ನಡೆಸಿದರೆ ಪ್ರತೀ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದ. ಹೊಸ ನಿಯಮ 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಆಕ್ಸಿಸ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‍ಗಳ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕ 21 ರೂ. ಪ್ಲಸ್ ಜಿಎಸ್‍ಟಿ ಇರಲಿದೆ. ಈ ಹಿಂದೆ 20 ರೂ. ಇದ್ದ ಶುಲ್ಕ 21 ರೂ.ಗೆ ಏರಿಕೆಯಾಗಲಿದೆ.ಗ್ರಾಹಕರು ತಮ್ಮ ಬ್ಯಾಂಕ್​ನ ಎಟಿಎಂಗಳಲ್ಲಿ ಐದು ಬಾರಿ ಕಾರ್ಡ್ ಮೂಲಕ ವಹಿವಾಟು ನಡೆಸಬಹುದಾಗಿದೆ. ಇದರಲ್ಲಿ ಹಣ ವಿತ್ ಡ್ರಾ ಅಥವಾ ಸ್ಟೇಟ್ಮೆಂಟ್ ನೋಡುವುದು ಅಥವಾ ಬ್ಯಾಂಕ್ ಬ್ಯಾಲೆನ್ಸ್ ನೋಡುವುದು ಇದು ಒಂದು ವಹಿವಾಟು ಎಂದೇ ಪರಿಗಣಿತವಾಗುತ್ತದೆ. ಒಂದು ತಿಂಗಳಿಗೆ ಇಂಥ ಐದು ವಹಿವಾಟನ್ನು ಉಚಿತವಾಗಿ ಮಾಡಲು ಅವಕಾಶ ಇದೆ.

ಆಗಸ್ಟ್ 1 ರಿಂದ ಜಾರಿಗೆ ಬಂದಿದ್ದ ಕ್ರಮದಲ್ಲಿ ಎಲ್ಲಾ ಬ್ಯಾಂಕ್ ಕೇಂದ್ರಗಳಲ್ಲಿ ಹಣಕಾಸಿನ ವಹಿವಾಟುಗಳಿಗೆ 15-17 ರೂ. ಹಾಗೂ ಹಣಕಾಸೇತರ ವಹಿವಾಟುಗಳಿಗೆ 5-6 ರೂ. ಶುಲ್ಕವನ್ನು ಹೆಚ್ಚಿಸಲು ಕೆಂದ್ರೀಯ ಬ್ಯಾಂಕ್ ಅವಕಾಶ ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top