fbpx
ಸಮಾಚಾರ

‘ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್’: ಎಜಾಜ್ ಪಟೇಲ್ ಸಾಧನೆ ಬಗ್ಗೆ ಅನಿಲ್ ಕುಂಬ್ಳೆ ಪ್ರತಿಕ್ರಿಯೆ, ಹೇಳಿದ್ದೇನು ಗೊತ್ತಾ?

ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಹಜಾಜ್ ಪಟೇಲ್ ಅವರು ಭಾರತದ ಎಲ್ಲಾ ಹತ್ತು ವಿಕೆಟ್ ಗಳನ್ನ ಪಡೆದುಕೊಂಡಿದ್ದಾರೆ . ಈ ಮೂಲಕ ಅನಿಲ್ ಕುಂಬ್ಳೆ ಮತ್ತು ಜಿಮ್ ಲೇಕರ್ ಅವರ ರೆಕಾರ್ಡ್ ಅನ್ನು ಸರಿಗಟ್ಟಿದ್ದಾರೆ..

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 325 ರನ್ ಗಳಿಸಿ ಆಲೌಟಾಯಿತು. ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 47.5 ಓವರ್ ಬೌಲಿಂಗ್ ಮಾಡಿದ್ದ ಹಜಾಜ್ ಪಟೇಲ್ 119 ರನ್ ಗಳನ್ನ ನೀಡಿ ಎಲ್ಲಾ ಹತ್ತು ವಿಕೆಟ್ ಗಳನ್ನ ಕಬಳಿಸಿದ್ದಾರೆ. ಈ ಮೂಲಕ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾದರು.



ಅನಿಲ್ ಕುಂಬ್ಳೆ ಪ್ರತಿಕ್ರಿಯೆ:
ಅಜಾಜ್ ಪಟೇಲ್ ಅವರು ಹತ್ತು ವಿಕೆಟ್ ಪಡೆದ ಕೂಡಲೇ ಲೆಜೆಂಡ್ ಅನಿಲ್ ಕುಂಬ್ಳೆ ಪ್ರತಿಕೆಯೇ ನೀಡಿದ್ದು ಕಿವೀಸ್ ಬೌಲರ್ ಗೆ ಶುಭಕೋರಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ ಅಜಾಜ್ ಪಟೇಲ್ ಅವರ ಸಾಧನೆಗೆ ಕುಹಿ ವ್ಯಕ್ತಪಡಿಸಿದ್ದಾರೆ.

“ನಮ್ಮ ಕ್ಲಬ್‌ಗೆ ಸುಸ್ವಾಗತ ಅಜಾಜ್ ಪಟೇಲ್. ಶ್ರೇಷ್ಠ 10, ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಟೆಸ್ಟ್ ಪಂದ್ಯದ 1 ಮತ್ತು 2 ನೇ ದಿನದಂದು ಅದನ್ನು ಸಾಧಿಸಿ ವಿಶೇಷ ಸಾಧನೆ ಮಾಡಿದ್ದೀರಿ. ” ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿ ಅಜಾಜ್ ಪಟೇಲ್ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ.

ಕುಂಬ್ಳೆ ದಾಖಲೆ:
1999ರ ಫೆಬ್ರವರಿ 7ರಂದು ಅನಿಲ್ ಕುಂಬ್ಳೆ ಈ ವಿಶ್ವದಾಖಲೆಯನ್ನು ಮಾಡಿದ್ದರು. ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದ ಎರಡೇ ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೇಟ್ ಗಳನ್ನು ಅನಿಲ್ ಕುಂಬ್ಳೆ ಪಡೆದಿದ್ದರು! ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 101ರನ್ ಗಳಿಸಿದ್ದ ಪಾಕ್, ಕುಂಬ್ಳೆ ಗೂಗ್ಲಿ ಜಾದೂ ಮುಂದೆ ಸಿಲುಕಿ 128 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ 207 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂದು ಕುಂಬ್ಳೆ ಕೇವಲ 74 ರನ್ ಗಳನ್ನ ನೀಡಿ ಹತ್ತು ವಿಕೆಟ್ ಕಬಳಿಸಿದ್ದರು.



copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top