fbpx
ಸಮಾಚಾರ

“ಶಿವರಾಮಣ್ಣನ ಈ ಆಸೆ ಕೊನೆಗೂ ಈಡೇರಲೇ ಇಲ್ಲ” ಬೇಸರ ಹೊರಹಾಕಿದ ಅನಿಲ್ ಕುಂಬ್ಳೆ

ಕನ್ನಡದ ಹಿರಿಯ ನಟ ಶಿವರಾಂ ಅವರು ಡಿಸೆಂಬರ್ 4 ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತ ಗಾಯಗೊಂಡು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಶಿವರಾಮ್ ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಗಣ್ಯರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅಂತೆಯೇ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಶಿವರಾಂ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರ ಆಸೆಯೊಂದು ಹಾಗೆ ಉಳಿದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಶಿವರಾಂ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಕ್ರಿಕೆಟಿಗ ಅನಿಲ್​ ಕುಂಬ್ಳೆ, “ನನಗೆ ಶಿವರಾಮ್ ಸರ್ ತುಂಬಾನೇ ಬೇಕಾದವರು. ಮನೆಗೆ ಬಂದಾಗ ಕೆಲ ವಿಚಾರದ ಬಗ್ಗೆ ಮಾತಾಡುತ್ತಿದ್ದರು. ಮನೆಯಲ್ಲಿ ಪೂಜೆ ಆಗಲಿ ಯಾವುದೇ ಕಾರ್ಯಕ್ರಮ ಇದ್ದರೂ ಕರೆಯುತ್ತಿದ್ದರು. ಅವರು ಇನ್ನಿಲ್ಲ ಎಂಬುದು ತುಂಬಾ ನೋವಿನ ವಿಚಾರ. ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಮನೆಗೆ ಬಂದು ಲೈಬ್ರೇರಿ ನೋಡು ಅಂದಿದ್ರು. ಕೆಲವೊಂದು ಫೋಟೋಗ್ರಾಫಿ ಮಾಡಿದ್ದೀನಿ ನೋಡಿ ಅಂದಿದ್ರು. ಅವರ ಕೋರಿಕೆ ನೇರವೇರಿಸೋಕೆ ಆಗಿಲ್ಲ ನನಗೆ. ಅವರ ಅಗಲಿಕೆ ಚಿತ್ರರಂಗಕ್ಕೆ ಇದು ದೊಡ್ಡ ನಷ್ಟ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top