fbpx
ಸಮಾಚಾರ

ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ.

ಈ ಉಚಿತ ಯೋಜನೆಯ ಹೆಸರು ‘ಜಿಯೋ ಧನ್ ದನಾ ಧನ್’. ಮತ್ತೊಂದು 3 ತಿಂಗಳ ಉಚಿತ ಯೋಜನೆಯನ್ನು ಗ್ರಾಹಕರಿಗೆ ಸಮರ್ಪಿಸಿದೆ. ಈ ಆಫರ್ ಪ್ರೈಮ್ ಹಾಗೂ ನಾನ್ ಪ್ರೈಮ್ ಗ್ರಾಹಕರಿಗೆ ಎರಡೂ ರೀತಿಯಲ್ಲಿ ಅನ್ವಯವಾಗಲಿದೆ. ಪ್ರೈಮ್ ಸದಸ್ಯರು 309 ರೂ. ರೀಚಾರ್ಜ್ ಮಾಡಿಸಿದರೆ ಪ್ರತಿನಿತ್ಯ 1 ಜಿಬಿ ಉಚಿತ ಇಂಟರ್’ನೆಟ್, ಉಚಿತ ಕರೆ,ಎಸ್’ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು 84 ದಿನಗಳ ಕಾಲ ಪಡೆಯಬಹುದು.

ನಾನ್ ಪ್ರೈಮ್ ಚಂದದಾರರು 309 ರೂ ರೀಚಾರ್ಜ್ ಜೊತೆಗೆ ಹೆಚ್ಚುವರಿ 99 ರೂ.ಗಳನ್ನು ರಿಚಾರ್ಜ್ ಮಾಡಿಸಬೇಕು. ಈ ಯೋಜನೆಯಲ್ಲಿ ಮೇಲಿನ ಎಲ್ಲ ಸೌಲಭ್ಯಗಳು ದೊರಯಲಿವೆ. ಅದೇ ರೀತಿ 509 ರೂ. ರಿಚಾರ್ಜ್ ಮಾಡಿಸಿದರೆ ನಿತ್ಯ 2 ಜಿಬಿ ಡಾಟಾ ಒಳಗೊಂಡು ಉಳಿದ ಉಚಿತ ಸೌಲಭ್ಯಗಳು ದೊರಯಲಿವೆ.

ಇತ್ತ ಜಿಯೋ 249 ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಒಟ್ಟು 56GB ಡೇಟಾವನ್ನು ನೀಡುತ್ತದೆ. ಏರ್ಟೆಲ್​ಗೆ ಹೋಲಿಸಿದರೆ ಇದು ಕಡಿಮೆ ಬೆಲೆಗೆ ಲಭ್ಯವಿದೆ. ಇತ್ತೀಚೆಗಷ್ಟೆ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಏರಿಕೆ ಮಾಡಿತ್ತು. ಇದರ ಪ್ರಕಾರ ಜಿಯೋದ ಅನಿಯಮಿತ ಕರೆಗಳ ಆರಂಭಿಕ ಪ್ಲಾನ್‌ ಈಗ ಇರುವ 78 ರೂ. ಗಳಿಂದ 91 ರೂ. ಗಳಿಗೆ ಏರಿಕೆಯಾಗಿದೆ. 129 ರೂ. ಯೋಜನೆಯು ಬೆಲೆ ಇದೀಗ 155 ರೂ., 199 ರೂ. ಪ್ರಿಪೇಯ್ಡ್‌ ಯೋಜನೆಯು ಇದೀಗ 239 ರೂ. ಆಗಿದೆ. ಅಂತೆಯೆ 399 ರೂ. ಬೆಲೆಯ ಪ್ರಿಪೇಯ್ಡ್‌ ಯೋಜನೆಯು 479 ರೂ. ದರದಲ್ಲಿ ಕಾಣಿಸಿಕೊಂಡಿದೆ. 599 ರೂ. ಬೆಲೆಯ ಪ್ರಿಪೇಯ್ಟ್‌ ಯೋಜನೆ 719 ರೂ., 2399ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್‌ ಯೋಜನೆ 2879 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇದರ ಬೆನ್ನಲ್ಲೆ ಜಿಯೋ ಇದೀಗ ಬಂಪರ್ ಆಫರ್​ವೊಂದನ್ನು ಘೋಷಿಸಿದ್ದು ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top