fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮತ್ತೊಂದು ತಾರಾ ಜೋಡಿ: ಕಿರುತೆರೆ ನಟಿ ಜೊತೆ ಸಪ್ತಪದಿ ತುಳಿದ ನಟ ದೀಪಕ್ ಮಹಾದೇವ್

ಚಂದನ್ ಹಾಗೂ ಕವಿತಾ ನಂತರ ಇದೀಗ ಮತ್ತೊಂದು ಕಿರುತೆರೆ ಜೋಡಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದೆ. ಹೌದು ನಟ ದೀಪಕ್ ಮಹಾದೇವ್ ಹಾಗೂ ನಟಿ ಚಂದನ ಮಹಾಲಿಂಗಯ್ಯ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಡಿಸೆಂಬರ್ ಒಂದರಂದು ಗುರುಹಿರಿಯರ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಒಂದರಲ್ಲಿ ಮದುವೆ ಸಮಾರಂಭ ನಡೆದಿದೆ. ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನವಜೋಡಿಗೆ ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ.

ದೀಪಕ್ ಮಹಾದೇವ್ ಹಾಗೂ ಚಂದನ ಇಬ್ಬರೂ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಆದರೆ ಮದುವೆ ಬಗ್ಗೆ ಎಲ್ಲಿಯೂ ಸಹ ಸುಳಿವು ಬಿಟ್ಟುಕೊಟ್ಟಿರಲಿಲ್ಲ ನಿಶ್ಚಿತಾರ್ಥ ಆದ ನಂತರವೇ ಅವರ ಪ್ರೀತಿಯ ವಿಚಾರ ಇಡೀ ಜಗತ್ತಿಗೆ ತಿಳಿದಿದ್ದು..

ನಾ ನಿನ್ನ ಬಿಡಲಾರೆ ನಾಯಕಿ ಹೀಗೆ ಮುಂತಾದ ಧಾರಾವಾಹಿಗಳಲ್ಲಿ ದೀಪಕ್ ಮಹದೇವ್ ಅಭಿನಯಿಸಿದ್ದರೆ ಸೀತಾ ವಲ್ಲಭ ಧಾರವಾಹಿಯಲ್ಲಿ ಚಂದನ ನಟಿಸಿ ಸೈ ಎನಿಸಿಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top