fbpx
ಸಮಾಚಾರ

ಹಂಸಲೇಖ ವಿವಾದದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಿಷ್ಟು

ಕನ್ನಡ ಚಿತ್ರರಂಗದ ದೈತ್ಯ ದೇಸಿಪ್ರತಿಭೆ ನಾದಬ್ರಹ್ಮ ಹಂಸಲೇಖ ಅವರು ದಲಿತರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ, ಸಮಾಜದಲ್ಲಿನ ಜಾಲಾತಿದೋರಣೆಗಳ ವಿಚಾರವಾಗಿ ನೀಡಿದ್ದ ಹೇಳಿಕೆ ಸಮಾಜದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಈ ವಿಚಾರವಾಗಿ ವಿರೋಧಿಗಳು ನಾದಬ್ರಹ್ಮನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಸದ್ಯ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಹಂಸಲೇಖಾರಿಗೆ ರಿಲೀಫ್ ಸಿಕ್ಕಿದ್ದು ವಿವಾದ ಬಹುತೇಕ ತಣ್ಣಗಾಗಿದೆ.

ಈ ಮದ್ಯೆ ಈ ವಿವಾದದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ದೀಪೋತ್ಸವ ಸಂಭ್ರಮ ಆರಂಭವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ
“ದೇವರನ್ನು ಎರಡು ವಿಧದಲ್ಲಿ ಸ್ತುತಿಸಬಹುದು. ಅದರಲ್ಲಿ ನಿಂದನಾ ಸ್ತುತಿ ಕೂಡಾ ಒಂದು‌. ಪೇಜಾವರ ಶ್ರೀಗಳನ್ನು ನಿಂದಿಸುವ ಮೂಲಕ ಸ್ತುತಿತಿಸಲಾಗಿದೆ‌‌. ಪೇಜಾವರರು ಬಾಳಿ ಬದುಕಿದ ರೀತಿ, ಅವರ ಬಗ್ಗೆ ಒಳ್ಳೆಯದನ್ನು ಹೇಳಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಪೇಜಾವರ ಶ್ರೀಗಳನ್ನು ತೆಗಳಿದ್ದಕ್ಕೆ ಪ್ರಪಂಚಾದ್ಯಂತ ಸುದ್ದಿಯಾಗಿದೆ. ಪೇಜಾವರ ಶ್ರೀಗಳ ಜೊತೆಗಿದ್ದ ಸಾತ್ವಿಕ ಶಕ್ತಿ ಜಾಗೃತವಾಗುತ್ತದೆ. ಅಷ್ಟರ ಮಟ್ಟಿಗೆ ಪೇಜಾವರರು ನಿಷ್ಕಲ್ಮಶ ವ್ಯಕ್ತಿ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಏನಿದು ವಿವಾದ?
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಈ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿರುವ ಜಾತೀಯತೆ ಮತ್ತು ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದರು. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು. ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top