fbpx
ಸಮಾಚಾರ

`ಕೌನ್​ ಬನೇಗಾ ಕರೋಡ್​ಪತಿ’ ಶೋನಲ್ಲಿ ಕನ್ನಡ ಸಿನಿಮಾ ಹವಾ: ಅಮಿತಾಭ್​ ಕಡೆಯಿಂದ ಶುಭ ಹಾರೈಕೆ

‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್​ ಮತ್ತು ನಟಿ ಮಿಲನಾ ನಾಗರಾಜ್​ ಅವರು ನಟಿಸಿರುವ ‘ಫಾರ್​ REGN’ ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ. ಹಲವು ಕಾರಣಗಳಿಗಾಗಿ ಈ ಚಿತ್ರ ಮೇಲೆ ನಿರೀಕ್ಷೆ ಮೂಡಿದೆ. ಈ ನಡುವೆ ‘ಕೌನ್​ ಬನೇಗಾ ಕರೋಡ್​ಪತಿ’’ ಕಾರ್ಯಕ್ರಮದ ವೇದಿಕೆಯಲ್ಲೂ ‘ಫಾರ್​ REGN’ ಚಿತ್ರದ ಬಗ್ಗೆ ಮಾತುಕತೆ ನಡೆದಿದೆ.

ಹೌದು‌ ಫಾರ್ REGN’ ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್ ಕೌನ್ ಬನೇಗಾ ಕರೋಡ್​ಪತಿ (KBC)ಕಾರ್ಯಕ್ರಮದ ನಿರೂಪಕ, ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ‘ಫಾರ್ REGN’ ಚಿತ್ರದ ಕುರಿತು ಮಾತನಾಡಿ , ಅಮಿತಾಬ್ ಬಚ್ಚನ್ ಅವರಿದ ಆಶೀರ್ವಾದ ಪಡೆದುಕೊಂಡಿದ್ದಾರೆ.

‘ಕೌನ್​ ಬನೇಗಾ ಕರೋಡ್​ಪತಿ’’ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಡೆಯಿಂದ ಆಶೀರ್ವಾದ ಪಡೆದುಕೊಂಡು ಬಂದಿರುವುದು ತಮ್ಮ ಪಾಲಿನ ಸಂತದ ಕ್ಷಣ ಎಂದು ನವೀನ್​ ದ್ವಾರಕನಾಥ್​ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top