fbpx
ಸಮಾಚಾರ

ಪೂಜೆ ವೇಳೆ ಶಿವರಾಮ್ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?

ಕನ್ನಡದ ಹಿರಿಯ ನಟ ಶಿವರಾಂ ಅವರು ಡಿಸೆಂಬರ್ 4 ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತ ಗಾಯಗೊಂಡು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

84 ವರ್ಷದ ಶಿವರಾಮ್ ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ಆಗ ಅವರನ್ನು ಕರೆತಂದು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಗಿತ್ತು. ಬಳಿಕ ಮನೆಯಲ್ಲಿ ಪೂಜೆ ಮಾಡುವಾಗ ಕುಸಿದು ಬಿದ್ದಿದ್ದರು, ನಂತರ ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿದ್ದು ಅರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟಿದರೂ ಚಿಕಿತ್ಸೆಗೆ ಸ್ಪಂದಿಸಿದೆ ಶಿವರಾಂ ಕೊನೆಯುಸಿರೆಳೆದಿದ್ದಾರೆ.

ಬೇಸರದ ಸಂಗತಿ ಏನೆಂದರೆ, ಪೂಜೆ ವೇಳೆ ಅವರು ರೂಢಿಸಿಕೊಂಡಿದ್ದ ಒಂದು ಅಭ್ಯಾಸವೇ ಪ್ರಾಣಕ್ಕೆ ಮುಳುವಾಯ್ತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ! ಹೌದು, ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು ಪೂಜೆ ಮಾಡಲು ಮನೆಯ ಟೆರೇಸ್ ಮೇಲೆ ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪ್ರತಿ ಬಾರಿ ಪೂಜೆ ಮಾಡುವಾಗಲೂ ಕೊಠಡಿಯ ಬಾಗಿಲು ಹಾಕಿಕೊಂಡು ಏಕಾಂತವಾಗಿ ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದರು.

ಕೆಲವೇ ದಿನಗಳ ಹಿಂದೆ ಕುಸಿದು ಬಿದ್ದಾಗಲೂ ಅವರು ಬಾಗಿಲು ಲಾಕ್​ ಮಾಡಿಕೊಂಡಿದ್ದರು! ಬಾಗಿಲು ಹಾಕಿಕೊಂಡಿದ್ದರಿಂದ ಅವರು ಕುಸಿದು ಬಿದ್ದಿದ್ದು ಯಾರಿಗೂ ತಕ್ಷಣಕ್ಕೆ ತಿಳಿಯಲಿಲ್ಲ. ತುಂಬ ಸಮಯದವರೆಗೆ ಅವರು ವಾಪಸ್​ ಬಾರದ ಕಾರಣ ಟೆರೆಸ್​ಗೆ ಹೋಗಿ ನೋಡಿದಾಗ ಪೂಜಾ ಕೊಠಡಿಯಲ್ಲಿ ಅವರು ಕುಸಿದು ಬಿದ್ದಿದ್ದು ತಿಳಿಯಿತು. ಆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top