fbpx
ಸಮಾಚಾರ

ಸಿನಿಮಾ ನೋಡುತ್ತಾ ಥಿಯೇಟರ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಚಿತ್ರದುರ್ಗದ ಯುವಕ ಸಾವು

ಸ್ಟಾರ್ ನಟರ ಸಿನಿಮಾ ಎಂದರೆ ಅವರ ಕಟ್ಟಾ ಅಭಿಮಾನಿಗಳಿಗೆ ಅದು ಹಬ್ಬವೇ ಸರಿ.. ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ದಿನ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ, ತಮಟೆ ಬಡಿದು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ. ಇನ್ನು ಥಿಯೇಟರ್ ಒಳಗೆ ಪರದೆ ಮೇಲೆ ತಮ್ಮ ಹೀರೊ ಎಂಟ್ರಿ ಕೊಡುತ್ತಿದ್ದಂತೆ ಸ್ಕ್ರೀನ್ ಮುಂದೆಯೇ ಹೋಗಿ ಅಭಿಮಾನಿಗಳು ಕುಣಿಯುವುದನ್ನ ನೋಡಿರುತ್ತೇವೆ. ಹೀಗೆ ಕುಣಿಯಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ.

ಈ ಘಟನೆ ನಡೆದಿರುವುದು ಕರ್ನಾಟಕದಲ್ಲೇ, ಹೌದು ಚಿತ್ರದುರ್ಗ ಜಿಲ್ಲೆಯ ಮರ್ಲಹಳ್ಳಿ ನಿವಾಸಿ ಮಾರೇಶ್ (29) ಮೃತ ದುರ್ದೈವಿ. ಮಾರೇಶ್ ತೆಲುಗು ನಟ ಬಾಲಕೃಷ್ಣ ಅಭಿಮಾನಿಯಾಗಿದ್ದನು. ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ ವೀಕ್ಷಿಸಲು ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಭಾಗ್ಯಲಕ್ಷ್ಮಿ ಚಿತ್ರಮಂದಿರಕ್ಕೆ ಆಗಮಿಸಿದ್ದನು. ಥಿಯೇಟರ್‌ನಲ್ಲಿ ಡ್ಯಾನ್ಸ್ ಮಾಡುವಾಗ ಮಾರೇಶ್ ಕಾಲು ಜಾರಿ ಬಿದ್ದಿದ್ದಾನೆ.

ಕೆಳಗಿದ್ದ ಕಬ್ಬಿಣದ ಸಲಾಖೆ ತಗುಲಿ ಗಂಭೀರ ಗಾಯಗಳಾಗಿತ್ತು. ಕಬ್ಬಿಣದ ಸಲಾಖೆ ಮೇಲೆ ಬಿದ್ದ ಮಾರೇಶ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಯಲ್ಲೇ ಬಾಲಕೃಷ್ಣ ಅಭಿಮಾನಿ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top