fbpx
ಸಮಾಚಾರ

ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್: ವಿಡಿಯೋ ವೈರಲ್

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಒಂದು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಈ ಮಧ್ಯೆ ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅಪ್ಪುಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹೌದು. ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ರೀ ಫೇಸ್ ಆ್ಯಪ್ ಮೂಲಕ ಮಾಡಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಹ್ಯಾಶ್ ಟ್ಯಾಗ್ ಬಳಸಿ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ.

 

 

View this post on Instagram

 

A post shared by David Warner (@davidwarner31)

 

ಅಪ್ಪು ಅವರ ಮುಖಕ್ಕೆ ವಾರ್ನರ್ ಅವರ ಮುಖಕ್ಕೆ ಜೋಡಿಸಿ ಎಡಿಟ್​ ಮಾಡಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ರೆಸ್ಪೆಕ್ಟ್ ಎಂದು ಬರೆದುಕೊಂಡು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ಮೂಲಕ ಅಪ್ಪುಗೆ ವಾರ್ನರ್ ಡಿಫರೆಂಟ್ ಆಗಿ ನಮನ ಸಲ್ಲಿಸಿದ್ದಾರೆ. ವಾರ್ನರ್ ವಿಶೇಷ ಗೌರವಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top