fbpx
ಸಮಾಚಾರ

ಮದುವೆ ಸಂಭ್ರಮದಲ್ಲಿರೋ ಬಾಲಿವುಡ್ ಜೋಡಿಯ ವಿರುದ್ಧ ಕೇಸ್ ದಾಖಲು

ಬಾಲಿವುಡ್ ಅಂಗಳದ ತುಂಬೆಲ್ಲಾ ಸದ್ಯ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಸುದ್ದಿಯೇ ಜೋರಾಗಿ ಕೇಳಿಸುತ್ತಿದೆ. ಈಗಾಗಲೇ ಈ ತಾರಾ ಜೋಡಿಯ ಮದುವೆ ಕಾರ್ಯಗಳು ಆರಂಭವಾಗಿದ್ದು ಇಬ್ಬರೂ ಅದಾಗಲೇ ಮದುವೆ ಮಂಟಪಕ್ಕೆ ತಲುಪಿದ್ದಾರೆ. ಇನ್ನೇನು ದಿನದ ಹೊತ್ತಿನಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡುವ ಈ ಜೋಡಿಯ ವಿರುದ್ಧ ಈಗ ಕೇಸೊಂದು ದಾಖಲಾಗಿದೆ..

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್ ರೆಸಾರ್ಟ್‌ನಲ್ಲಿ ವಿವಾಹವಾಗಲಿದ್ದಾರೆ. ವರದಿಗಳ ಪ್ರಕಾರ ಅವರ ವಿವಾಹ ಸಂಭ್ರಮ ಇಂದಿನಿಂದ (ಡಿಸೆಂಬರ್ 7) ಪ್ರಾರಂಭವಾಗಲಿವೆ. ವಿಕ್ಕಿ-ಕತ್ರಿನಾ ಅವರ ವಿವಾಹದ ಕಾರಣದಿಂದ ಸಿಕ್ಸ್ ಸೆನ್ಸ್ ರೆಸಾರ್ಟ್‌ ಬಳಿ ರುವ ಚೌತ್ ಮಾತಾ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಡಿಸೆಂಬರ್ 6-12 ರವರೆಗೆ ನಿರ್ಬಂಧಿಸಲಾಗಿದೆ. ಇಡೀ ಕಾರಣಕ್ಕೆ ಈಗ ಈ ತಾರಾ ಜೋಡಿಯ ವಿರುದ್ಧ ದೂರು ದಾಖಲಾಗಿದೆ.

ವಿಕ್ಕಿ-ಕತ್ರಿನಾ ಅವರ ವಿವಾಹದ ಕಾರಣದಿಂದ ಡಿಸೆಂಬರ್ 6-12 ರವರೆಗೆ ಚೌತ್ ಮಾತಾ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ನಿರ್ಬಂಧಿಸಿದ ಆರೋಪದ ಮೇಲೆ ವಕೀಲ ನೈತ್ರಾಬಿಂದ್ ಸಿಂಗ್ ಜಾದೂನ್ ಅವರು ಈ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಜಾದೂನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದು, ಭಕ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನಕ್ಕೆ ಹೋಗುವ ದಾರಿಯನ್ನು ತೆರೆಯುವಂತೆ ಮನವಿ ಮಾಡಿದ್ದಾರೆ.

ಶ್ರೀಸಾಮಾನ್ಯರು ಹಾಗೂ ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್ ಸಿಕ್ಸ್ ಸೆನ್ಸ್ ಮುಂಭಾಗದಿಂದ ಚೌತ್ ಮಾತೆಯ ದೇವಸ್ಥಾನಕ್ಕೆ ದಾರಿ ತೆರೆಯಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top