fbpx
ಸಮಾಚಾರ

ಸಂಕಷ್ಟದಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರತಂಡ: ಕೋರ್ಟ್ ಮೆಟ್ಟಿಲೇರಿದ ವಿವಾದ

ಇತ್ತೀಚಿಗಷ್ಟೇ ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಗರುಡಗಮನ ವೃಷಭವಾಹನ’ ಚಿತ್ರವೂ ಹಿಂದೂಗಳ ಕೆಂಗಣ್ಣಿಗೆ ತುತ್ತಾಗಿದೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿರುವ ಈ ಸಿನಿಮಾದ ಶೈಲಿ, ಕಥಾವಸ್ತು, ಹೊಸತನಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈ ಮಧ್ಯೆ ಸಿನಿಮಾ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ಆರೋಪ ಕೇಳಿಬಂದಿದೆ.

ಚಿತ್ರದ ವಿವಾದವು ಇಂದು ಕೋರ್ಟ್ ಮೆಟ್ಟಿಲೇರಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕ್ರೌರ್ಯ ಮೆರೆಯುವ ದೃಶ್ಯವಿದ್ದು, ಅದಕ್ಕೆ ಮಹದೇಶ್ವರನ `ಸೋಜುಗಾದ ಸೂಜುಮಲ್ಲಿಗೆ’ ಜನಪದ ಹಾಡು ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರದ ವಿರುದ್ಧ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ವಿಜಯ್‍ಕುಮಾರ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದರು.

ವಿಜಯ್‍ಕುಮಾರ್ ಅವರ ಈ ಅರ್ಜಿಯಲ್ಲಿ, ಚಿತ್ರದಲ್ಲಿ ಮಹದೇಶ್ವರನ ಹಾಡು ತೆಗೆಯಬೇಕು ಇಲ್ಲವೇ, ಮ್ಯೂಟ್ ಮಾಡಬೇಕು ಎಂದು ಸೂಚಿಸಲಾಗಿದೆ. ಅದು ಅಲ್ಲದೇ ಅವರು ಚಿತ್ರದ ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟ ರಿಷಬ್ ಶೆಟ್ಟಿ, ನಿರ್ಮಾಪಕರಾದ ರವಿ ರೈ.ಬಿ.ವಿ, ವಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ಚಿತ್ರದಲ್ಲಿ ಸೋಜುಗಾದ ಸೂಜು ಮಲ್ಲಿಗೆ ಹಾಡು ಬಳಕೆಗೆ ಮಾದಪ್ಪನ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಮಲೈಮಹದೇಶ್ವರರ ಭಕ್ತಿಗೀತೆಯನ್ನ ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ಕೊಲೆ ಮಾಡಿ ಕುಣಿಯುವ ದೃಶ್ಯಕ್ಕೆ ಹಾಡು ಬಳಸಿರೋದು ಸರಿಯಲ್ಲ. ಸಂಬಂಧವೇ ಇರದ ದೃಶ್ಯಕ್ಕೆ ಅಸಹಜವಾಗಿ ಮಹದೇಶ್ವರನ ಹಾಡು ಬಳಕೆ ಮಾಡಲಾಗಿದೆ ಎಂದು ಚಾಮರಾಜನಗರದ ಕಲಾವಿದರು ಹಾಗೂ ಮಾದಪ್ಪ ಭಕ್ತರಿಂದ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top