fbpx
ಸಮಾಚಾರ

ಮೊದಲ ಬಾರಿಗೆ ಮುದ್ದು ಕಂದನ ಫೋಟೋ ರಿವೀಲ್ ಮಾಡಿದ ‘ಶೈಲೂ’ ನಟಿ ಭಾಮಾ; ಏನು ವಿಶೇಷ?

ಕನ್ನಡದಲ್ಲಿ ಶೈಲೂ ಮೊದಲಾಸಲ ಮುಂತಾದ ಸಿನಿಮಾಗಳಿಂದ ಖ್ಯಾತಿ ಗಳಿಸಿದವರು ನಟಿ ಭಾಮ ಮುದ್ದು ಮುಖ ಚಂದದ ನಟನೆ ಇಂದ ಕನ್ನಡ ಸಿನಿರಸಿಕರ ಮನಗೆದ್ದಿದ್ದ ಭಾಮಾ ಮದುವೆಯಾದ ಬಳಿಕ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದರು.

 

 

ಬಾಲ್ಯದ ಗೆಳೆಯ ಅರುಣ್ ಅವರನ್ನು ಮದುವೆಯಾದ ನಂತರ ದುಬೈನಲ್ಲಿ ಸೆಟಲ್ ಆಗಿರುವ ಭಾಮ ಪತಿಯ ಬ್ಯುಸಿನೆಸ್ ಗೆ ಬೆಂಬಲವಾಗಿ ನಿಂತಿದ್ದಾರೆ.. ಈ ಮದ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಭಾಮಾ ಮಗುವಿಗೆ ‘ಗೌರಿ’ ಎಂದು ಹೇರಿಟ್ಟಿದ್ದರು. ಇದೀಗ ಭಾಮಾ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದ್ದು ಇದೆ ಮೊದಲ ಬಾರಿಗೆ ಮುದ್ದು ಮಗಳ ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ನಟನೆಯಿಂದ ದೂರವಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಭಾಮಾ ಪತಿ, ಕುಟುಂಬದ ಜೊತೆಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದುವರೆಗೂ ಮಗಳ ಫೋಟೋವನ್ನು ಮಾತ್ರ ಶೇರ್ ಮಾಡಿರಲಿಲ್ಲ. ಮಗಳ ಮೊದಲ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರು ಗೌರಿ ಜನ್ಮದಿನದ ಆಚರಣೆ ಫೋಟೋ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top