fbpx
ಸಮಾಚಾರ

‘ಪವರ್ ಸ್ಟಾರ್’ ಹೆಸರು ತೆಗೆಯುವಂತೆ ಪುನೀತ್ ಮನವಿ ಮಾಡಿಕೊಂಡಿದ್ದೇಕೆ?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪುನೀತ್ ರಾಜಕುಮಾರ್ ಅವರ ಕನಸಿನ ಗಂಧದ ಗುಡಿ ಟೈಟಲ್ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಅದು ಸಾಕಾರಗೊಳ್ಳುವ ಮೊದಲೇ ಅದರ ನಿರ್ಮಾತೃ ಪುನೀತ್ ದೈಹಿಕವಾಗಿ ನಮ್ಮಿಂದ ದೂರವಾದರು..

ಕರ್ನಾಟಕದ ಹಲವು ಸುಂದರ ಪರಿಸರಗಳು, ಕಾಡುಗಳು, ಗುಡ್ಡ, ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು, ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ ಚಿತ್ರವಿದು. ಪುನೀತ್ ನಿಧನರಾದರೆಂದು ಗಂಧದ ಗುಡಿಯ ಕೆಲಸ ನಿಲ್ಲಲಿಲ್ಲ. ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಇಂದು ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

ಬಿಡುಗಡೆಯಾಗಿರುವ ಗಂಧದಗುಡಿ ಸಾಕ್ಷ್ಯ ಚಿತ್ರದ ಟೀಸರ್ ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಕರುನಾಡಿನ ಪ್ರಕೃತಿ ಸೌಂದರ್ಯವನ್ನು ಮನಮೋಹಕವಾಗಿ ಸೆರೆ ಹಿಡಿದಿರುವ ಈ ಡಾಕ್ಯುಮೆಂಟರಿಯ ಕ್ಯಾಮೆರಾ ವರ್ಕ್, ಹಿನ್ನಲೆ ಸಂಗೀತ ಮುಂತಾದ ವಿಚಾರಗಳು ನೆಟ್ಟಿಗರ ಗಮನಸೆಳೆದಿದೆ. ಟ್ರೇಲರ್ ಬಿಡುಗಡೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅಮೋಘ ವರ್ಷ ‘ಗಂಧದ ಗುಡಿ’ ಪ್ರಾಜೆಕ್ಟ್‌ ಬಗ್ಗೆ, ಅದರ ಚಿತ್ರೀಕರಣದ ಬಗ್ಗೆ ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪವರ್​ ಸ್ಟಾರ್​ ಬೇಡ ಎಂದಿದ್ದರಂತೆ ಅಪ್ಪು!
ಗಂಧದ ಗುಡಿ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅಮೋಘ ವರ್ಷ ಮತ್ತೊಂದು ವಿಚಾರವನ್ನು ಬಹಿರಂಗ ಮಾಡಿದ್ದಾರೆ. ‘ಪುನೀತ್​ ರಾಜ್​ಕುಮಾರ್​​ ಒಂದು ಮನವಿಯನ್ನು ನನ್ನ ಬಳಿ ಮಾಡಿಕೊಂಡಿದ್ದರು. ನಾವು ಈ ಪ್ರಾಜೆಕ್ಟ್‌ನ ಟೈಟಲ್ ಕಾರ್ಡ ಅನ್ನು ಪುನೀತ್‌ಗೆ ಕಳಿಸಿಕೊಟ್ಟಾಗ. ಅವರು ಮರಳಿ ಕರೆ ಮಾಡಿ, ನನ್ನದೊಂದು ಸಣ್ಣ ಮನವಿ ಇದೆ. ಈ ಟೈಟಲ್‌ ಕಾರ್ಡ್‌ನಲ್ಲಿ ನನ್ನ ಹೆಸರಿನ ಪಕ್ಕ ಇರುವ ‘ಪವರ್‌ ಸ್ಟಾರ್’ ಅನ್ನು ತೆಗೆದು ಬಿಡಿ ಎಂದು ಕೇಳಿದರು. ‘ಗಂಧದ ಗುಡಿ’ಯಲ್ಲಿ ನಾನು ನಾನಾಗಿ ಅಷ್ಟೆ ಇದ್ದೇನೆ. ಇಲ್ಲಿ ನಾನು ಹೀರೋ ಅಲ್ಲ. ಹಾಗಾಗಿ ಪವರ್‌ ಸ್ಟಾರ್ ಬೇಡ ಎಂದು ಮನವಿ ಮಾಡಿದರು. ಇದು ಪುನೀತ್​ ರಾಜ್​ಕುಮಾರ್​ ಅವರ ಸರಳತೆಗೆ ಸಾಕ್ಷಿಎಂದು ಅಮೋಘ ವರ್ಷ ಭಾವುಕರಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top