fbpx
ಸಮಾಚಾರ

ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಸಿಡಿಎಸ್​ ಬಿಪಿನ್ ರಾವತ್ ಪತ್ನಿ ದುರ್ಮರಣ

ರಕ್ಷಣಾ ಪಡೆಗಳ ಮುಖ್ಯಸ್ಥ (Chief of Defence Staff – CDS) ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಊಟಿಯಲ್ಲಿ ಪತನಗೊಂಡಿದ್ದು, ರಾವತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಇದೇ ದುರಂತದಲ್ಲಿ ರಾವತ್ ಅವರ ಪತ್ನಿ ದುರ್ಮರಣರಾಗಿದ್ದಾರೆ.

​ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್ ಸೇರಿ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇದರಲ್ಲಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಅದರಲ್ಲೀಗ 11 ಮಂದಿಯ ಮೃತದೇಹ ಪತ್ತೆಯಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದರೂ, ಇನ್ನೂ ಮೃತರು ಯಾರ್ಯಾರು? ಗಾಯಗೊಂಡವರು ಯಾರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಹವಮಾನ ವೈಪರೀತ್ಯ ಹಿನ್ನೆಲೆ ಇಂಜಿನ್ ನಿಷ್ಕ್ರಿಯಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ದುರಂತ ಎಷ್ಟು ತೀವ್ರವಾಗಿತ್ತು ಎಂದರೆ ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಊಟಿ ಸ್ಟಾಫ್ ಕಾಲೇಜಿನಲ್ಲಿ ಸಿಡಿಎಸ್ ರಾವತ್ ಉಪನ್ಯಾಸ ಕಾರ್ಯಕ್ರಮವಿತ್ತು. ಇಲ್ಲಿಂದ ಸೂರೂರಿಗೆ ಹೋಗಿ ಅಲ್ಲಿಂದ ದೆಹಲಿಗೆ ಮರಳಬೇಕಿತ್ತು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top