fbpx
ಸಮಾಚಾರ

ಸರ್ಕಾರಿ ಬಸ್ ಹತ್ತೋ ಮುನ್ನ ಚಿಲ್ಲರೆ ಇಟ್ಕೊಳ್ಳಿ: ಬಸ್ ನಲ್ಲಿ ಚಿಲ್ಲರೆ ಕೇಳಿದರೆ 3 ವರ್ಷ ಜೈಲು!

ಬಸ್ (Bus)ಗಳಲ್ಲಿ ಚಿಲ್ಲರೆ ಹಣಕ್ಕಾಗಿ ನಿರ್ವಾಹಕರ ಜೊತೆಯಲ್ಲಿ ಪ್ರಯಾಣಿಕರು ಜಗಳ ಮಾಡಿರೋದನ್ನು ಎಲ್ಲರೂ ನೋಡಿರುತ್ತಾರೆ. ಒಂದಿಷ್ಟು ಜನರಂತೂ ತಮಗೆ ಪ್ರತ್ಯೇಕ ಚಿಲ್ಲರೆ ನೀಡಬೇಕೆಂದು ನಿರ್ವಾಹಕರ ಜೊತೆ ಜಗಳ ಮಾಡುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಾದಾತ್ಮಕ ಪೋಸ್ಟರ್ ಗಳನ್ನು ನಿಲ್ದಾಣಗಳಲ್ಲಿ ಅಂಟಿಸಿದೆ. ಸಂಸ್ಥೆಯ ವಿರುದ್ಧ ಸಾರ್ವಜನಿರಕ ಅಸಮಾಧಾನ ಹೊರ ಹಾಕಿದ್ದು, ಅಂಟಿಸಿರುವ ಪೋಸ್ಟರ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಪೋಸ್ಟರ್ ನಲ್ಲಿ ಇರುವುದೇನು?
“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 21 ರ ಅಡಿಯಲ್ಲಿ, ಸುಪ್ರೀಂ ಕೋರ್ಟ್ NWKRTC ಚಾಲಕರು ಮತ್ತು ಕಂಡಕ್ಟರ್‌ಗಳನ್ನು ಸಾರ್ವಜನಿಕ ಸೇವಕರು ಎಂದು ಗುರುತಿಸಿದೆ. ಆದ್ದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ಚಾಲಕ ಅಥವಾ ಕಂಡಕ್ಟರ್ ಕರ್ತವ್ಯ ನಿರ್ವಹಿಸದಂತೆ ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ್ 332 ಮತ್ತು 353 ರ ಅಡಿಯಲ್ಲಿ, ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಐಪಿಸಿಯ ಸೆಕ್ಷನ್ 186 ರ ಅಡಿಯಲ್ಲಿ, ಅನುಸರಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬಹುದು, ”ಎಂದು ಕನ್ನಡದಲ್ಲಿ ಬರೆಯಲಾಗಿದೆ.

ಚಿಲ್ಲರೆ ತೆಗೆದುಕೊಂಡು ಬರಬೇಕು ಎಂದು ಯಾವ ನಿಯಮದಡಿ ಕಡ್ಡಾಯ ಮಾಡಿದೆ. ಚಿಲ್ಲರೆ ತರುವುದು ಸಾಮಾನ್ಯವಾಗಿ ಪ್ರಯಾಣಿಕರು ಮತ್ತು ನಿರ್ವಾಹಕರಿಬ್ಬರ ಜವಾಬ್ದಾರಿ. ಆದರೆ, ಹೆಚ್ಚಿನ ಜವಾಬ್ದಾರಿ ಸೇವಾದಾತರಿಗೆ ಇರುತ್ತದೆ. ಇಲ್ಲಿ ಐಪಿಸಿ ಸೆಕ್ಷನ್‌ಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಾರ್ವಜನಿಕರು ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top