fbpx
ಸಮಾಚಾರ

“ಶ್ರೀಮಂತ ಮಹಿಳೆಯರು ತನಗಿಂತಲೂ ಕಿರಿಯ ವ್ಯಕ್ತಿಯನ್ನು ಮದುವೆಯಾಗುತ್ತಿರುವುದು…….” ಕತ್ರಿನಾಗೆ ಕಂಗನಾ ಹೇಳಿದ್ದೇನು ಗೊತ್ತಾ?”

ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನ ವ್ಯಕ್ತಪಡಿಸುವುದು ಬಾಲಿವುಡ್ ನಟಿ ಕಂಗನಾ ಅವರು ಇತ್ತೀಚಿಗೆ ರೂಢಿಸಿಕೊಂಡಿರುವ ಚಾಳಿ. ಸಿನಿಮಾ ವಿಚಾರಗಳನ್ನ ಬಿಟ್ಟು ಕೇವಲ ವಿವಾದಗಳಿಂದ ಮಾತ್ರವೇ ಸುದ್ದಿಯಾಗುತ್ತಿರುವ ವಿವಾದಾತ್ಮಕ ನಟಿ ಕಂಗನಾ ಈಗ ಕತ್ರಿನಾ ವಿಕ್ಕಿ ಕೌಶಲ್ ಮದುವೆಯ ಬಗ್ಗೆ ಏಕಮುಖ ಆಲೋಚನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.

ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ನೆರವೇರುತ್ತಿದೆ. ಡಿ.9ರಂದು ಈ ಜೋಡಿ ಹಸೆಮಣೆ ಏರುತ್ತಿದೆ. ಈಗಾಗಲೇ ವಿವಾಹ ಪೂರ್ವ ಆಚರಣೆಗಳು ಆರಂಭ ಆಗಿವೆ. ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾಗೆ 38 ವರ್ಷ ವಯಸ್ಸು. ವಿಕ್ಕಿ ಕೌಶಲ್​ಗೆ ಈಗಿನ್ನೂ 33ರ ಪ್ರಾಯ. ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ಜೊತೆ ಕತ್ರಿನಾ ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ. ಈ ಬಗ್ಗೆ ಕಂಗನಾ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

 

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ಕಂಗನಾ ರಣಾವತ್‌, ಸಿನಿಮಾರಂಗದ ಮಹಿಳೆಯರು ಯಶಸ್ವಿ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ತಮಗಿಂತಲೂ ಕಿರಿಯ ವಯಸ್ಸಿನವರನ್ನು ವಿವಾಹವಾಗುವ ಮೂಲಕ ಈವರೆಗೂ ಇದ್ದ ಕೆಲವು ನಿಯಮಗಳನ್ನು ಬ್ರೇಕ್‌ ಮಾಡಿದ್ದಾರೆ ಎಂದು ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ಹೆಸರನ್ನು ಪ್ರಸ್ತಾಪಿಸದೆಯೇ ಅವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಯಶಸ್ವಿ ಪುರುಷನೊಬ್ಬ ತನಗಿಂತಲೂ ಕಿರಿಯ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವು ಸಾಮಾನ್ಯ. ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಯಶಸ್ವಿಯಾಗುವುದು ಸಮಸ್ಯೆ ಎಂದೇ ಭಾವಿಸಲಾಗಿದೆ. ತನಗಿಂತ ಕಿರಿಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವುದು ಮಹಿಳೆಯರಿಗೆ ಅಸಾಧ್ಯದ ಮಾತು. ಇಂತಹ ಸನ್ನಿವೇಶದಲ್ಲಿ ಯಶಸ್ವಿ ಮಹಿಳೆಯರೊಬ್ಬರು ತನಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ. ಸಿನಿಮಾ ಕ್ಷೇತ್ರದಲ್ಲಿ ಆ ಒಂದು ಬದಲಾವಣೆಯಾಗಿದೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top