fbpx
ಮನೋರಂಜನೆ

ಮಾಡೆಲಿಂಗ್‌ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಳು ಸಚಿನ್ ಪುತ್ರಿ: ಸಾರಾ ತೆಂಡೂಲ್ಕರ್ ಜಾಹಿರಾತು ವಿಡಿಯೋ ನೋಡಿ..

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಪೋಸ್ಟ್ ಗಳ ಮೂಲಕ ಹೆಚ್ಚು ಸುದ್ದಿಗೆ ಕಾರಣವಾಗುತ್ತಿದ್ದ ಸಚಿನ್ ಮಗಳು ಈಗ ಬೇರೆ ಕರಣವೊಂದಕ್ಕೆ ಸುದ್ದಿಯಾಗಿದ್ದಾಳೆ. ಏನದು ಬೇರೆ ಕಾರಣ ಅಂತೀರಾ? ಮುಂದೆ ಓದಿ

 

 

View this post on Instagram

 

A post shared by Sara Tendulkar (@saratendulkar)

 

ಸಾರ ತೆಂಡೂಲ್ಕರ್ ಇದೀಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಾರಾ ಹೆಸರುವಾಸಿ ಬಟ್ಟೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವಂತಿದೆ. ಈ ಸಂಬಂಧ ಬಿಡುಗಡೆಯಾದ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಖ್ಯಾತ ಉಡುಪು ಬ್ರ್ಯಾಂಡ್ ಎಜಿಯೊನ ಹೊಸ ಉಡುಪು ಶ್ರೇಣಿಯನ್ನು ಹೊರತಂದಿದ್ದು ಅದಕ್ಕಾಗಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಮಾಡಿದ್ದಾರೆ. ಸಾರಾ ತೆಂಡೂಲ್ಕರ್ ಜೊತೆಗೆ ನಟಿ ಬನಿತಾ ಸಂಧು ಹಾಗೂ ಟಾನಿಯಾ ಶ್ರಾಫ್ ಸಹ ಇದ್ದಾರೆ. ಮೂವರು ಒಟ್ಟಿಗೆ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ.ಇದು ಸಾರಾ ತೆಂಡೂಲ್ಕರ್ ಅವರ ಮೊದಲ ಜಾಹೀರಾತಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಡೆಲಿಂಗ್, ನಟನೆ ಮಾಡುವ ಸಾಧ್ಯತೆ ಇದೆ. ಬಾಲಿವುಡ್‌ಗೆ ಬಂದರೂ ಬರಬಹುದು ಸಾರಾ ಎಂಬ ಗುಸುಗುಸು ಕೇಳಿಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top