fbpx
ಸಮಾಚಾರ

ಇಡೀ ವರ್ಷ ವಿಶ್ವದ ಗಮನ ಸೆಳೆದ 15 ಅಂತಾರಾಷ್ಟ್ರೀಯ ಸುದ್ದಿಗಳು!

೨೦೨೧ ಅದ್ಹೇಗೆ ಮುಗಿತೋ ಗೊತ್ತಿಲ್ಲ. ೨೦೨೨ ಹತ್ತಿರ ಬಂದಾಗಿದೆ. ಒಂದಿಷ್ಟು ಸಿಹಿ ನೆನಪುಗಳು, ಒಂದಿಷ್ಟು ಕಹಿ ನೋವುಗಳನ್ನು ಕೊಟ್ಟ ೨೦೨೧ರಲ್ಲಿ ನೆನಪಿನಲ್ಲುಳಿಯುವ ಒಂದಿಷ್ಟು ಘಟನಾವಳಿಗಳನ್ನು ಸ್ಮರಿಸೋಣ.
ಅಂತರಾಷ್ಟಿoಯ ಮಟ್ಟದಲ್ಲಿ ೨೦೨೧ರಲ್ಲಿ ಆದ ೧೫ ಅತ್ಯಂತ ಮಹತ್ವದ ಬೆಳವಣಿಗೆಗಳು

ಅಫ್ಘನ್ನಲ್ಲಿ ತಾಲೀಬಾನಿ ತಾಲೀಮು
ಕಳೆದ ಆಗಸ್ಟ್ ೧೫ರಲ್ಲಿ ಅಮೇರಿಕಾದ ಸೇನೆ ಮತ್ತು ನ್ಯಾಟೋ ಪಡೆಗಲು ಅಫ್ಘನ್ನಿಂದ ಹೊರಬಂದ ಬೆನ್ನಲ್ಲೇ ತಾಲೀಬಾನಿಗಳು ಕಾಬೂಲ್ನಲ್ಲಿ ಬಿಳಿಯ ಧ್ವಜ ನೆಟ್ಟು ಅಫ್ಘನ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಬರೋಬ್ಬರಿ ಎರಡು ದಶಕಗಳ ಬಳಿಕ ತಮ್ಮ ಅಧಿಪತ್ಯ ಸ್ಥಾಪಿಸಿದ್ದ ತಾಲೀಬಾನ್ ಮತ್ತೆ ಆಡಳಿತಕ್ಕೆ ಬಂದಿದ್ದು ನೆರೆಯ ರಾಷ್ಟçಗಳ ನಿದ್ದೆಗೆಡಿಸಿತ್ತು. ಅಶ್ರಫ್ ಘನಿ ನೇತೃತ್ವದ ಚುನಾಯಿತ ಸರ್ಕಾರವನ್ನು ಬೀಳಿಸಿ ಅಧಿಕಾರ ಕಬಳಿಸಿದ ತಾಲೀಬಾನ್ ಕಮಾಂಡರ್ಗಳು ಬಳಿಕ ತಮ್ಮ ಅಧಿಕಾರ ಮೆರೆದಿದ್ದರು.
ಬಂದೂಕಿನಿoದ ದೇಶ ನಡೆಸುವುದು ಸಾಧ್ಯವಿಲ್ಲ ಎಂಬುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದ ಚಿತ್ರಗಳು ಸ್ಪಷ್ಟವಾಘಿದ್ದು ಬಂದೂಕು ಹಿಡಿದು ಅಲ್ಲಿನ ಜಿಮ್ ಮತ್ತು ಪಾರ್ಕ್ಗಳಲ್ಲಿ ಆಟವಾಡಿದ್ದ ತಾಲೀಬಾನಿಗಳು ಟ್ರೋಲಿಗರ ಆಹಾರವಾಗಿದ್ದರು.

ವಿಮಾನಕ್ಕಾಗಿ ನೂಕು ನುಗ್ಗಲು
ಆಗಸ್ಟ್ ೧೫ರಂದು ತಾಲಿಬಾನಿಗಳ ವಶವಾದ ಬಳಿಕ ಅಫ್ಘನ್ನಲ್ಲಿ ಅಶಾಂತಿ ತಲೆದೂರಿದ್ದು ಅಲ್ಲಿಂದ ಜನ ಹೊರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದರು. ಇದರ ಪರಿಣಾಮವಾಗಿ ಕಾಬೂಲ್ ಅಂತರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ವಿಮಾನ ನಿಲ್ದಾಣದ ಸುತ್ತಮುತ್ತ ಇದ್ದ ಮುಳ್ಳುತಂತಿಯನ್ನೂ ಲೆಕ್ಕಿಸದೆ ಜನ ವಿಮಾನ ಏರಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡುಬAತು. ಕೊನೆಗೆ ಅಮೇರಿಕಾ ಸೈನಿಕರು ಜನರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಸಂಸತ್ತಿನಲ್ಲಿ ಟ್ರಂಪ್ ಬೆಂಬಲಿಗರ ಪುಂಡಾಟ
ಚುನಾವಣೆಯಲ್ಲಿ ಟ್ರಂಪ್ ಗೆಲ್ಲಲಿಲ್ಲ ಅನ್ನುವ ಕಾರಣಕ್ಕಾಗಿ ಅವರ ಬೆಂಬಲಿಗರು ಸಂಸತ್ ನಲ್ಲಿ ಮಿತಿ ಮೀರಿ ವರ್ತಿಸಿದ ಘಟನೆ 2021ರ ಜನವರಿಯಲ್ಲಿ ವರದಿಯಾಗಿತ್ತು. ತಮ್ಮ ಸೋಲಿನಿಂದ ಹತಾಶರಾಗಿ ಈ ಘಟನೆಗೆ ಪ್ರಚೋದನೆ ನೀಡಿದ್ದರು ಅನ್ನುವ ಕಾರಣಕ್ಕಾಗಿ ಟ್ರಂಪ್ ಅವರ ಮೇಲೆ ವಾಗ್ದಂಡನೆ ಪ್ರಕ್ರಿಯೆಯೂ ನಡೆದಿತ್ತು. ಆದರೆ ಬಹುಮತ ಸಿಗದ ಕಾರಣ ಟ್ರಂಪ್ ಬಚಾವಾದರು.
ಮತ ಎಣಿಕೆಯ ಸಂದರ್ಭದಲ್ಲೂ ಕೂಡ ಟ್ರಂಪ್ ಬೆಂಬಲಿಗರು ದಾಂಧಲೆ ಎಬ್ಬಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಜತೆಗೆ ಜಟಾಪಟಿ ನಡೆದಿತ್ತು.

ಅಧ್ಯಕ್ಷರಾಗಿ ಜೋ ಬಿಡನ್

ಅಮೆರಿಕದ ನಲವತ್ತೈದನೇ ಅಧ್ಯಕ್ಷರಾಗಿ ಜೋ ಬಿಡನ್ ಜನವರಿ 20 ರಂದು ಪ್ರಮಾಣವಚನ ಸ್ವೀಕರಿಸಿದರು. ಕ್ಯಾಪಿಟಲ್ ಭವನ ದಲ್ಲಿ ಈ ಅದ್ದೂರಿ ಸಮಾರಂಭ ನಡೆದಿತ್ತು. ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ರು.
ಹಳೆಯ ಅಧ್ಯಕ್ಷ ಟ್ರಂಪ್ ಮಾಡಿದ್ದ ಕೆಲವು ನಿರ್ಧಾರಗಳು ಮತ್ತು ಯೋಜನೆಗಳನ್ನು ಕೈಬಿಟ್ಟು ವಿಶ್ವದ ಹುಬ್ಬೇರಿಸಿದ್ರು ಬಿಡನ್. ಅಮೇರಿಕದ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಬೇಕು ಅಂತ್ಹೇಳಿ ಇಡಿಯ ಅಮೆರಿಕಕ್ಕೆ ಕರೆ ಕೊಟ್ಟಿದ್ದು 2021 ರ ಪ್ರಮುಖ ಸುದ್ದಿಗಳಲ್ಲಿ ಒಂದಾಗಿತ್ತು.

ಕೋವಿಡ್ ಮಾತ್ರೆಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಬ್ರಿಟನ್

ಕೊರೋನಾ ವೈರಸ್ ವಿರುದ್ದ ವಿಶ್ವದ ಎಲ್ಳಾ ರಾಷ್ಟçಗಲು ಲಸಿಕಾ ಅಭಿಯಾನ ನಡೆಸುತ್ತಿದ್ದರೆ ಬ್ರಿಟನ್ ಕೊರೋನಾ ವೈರಸ್ ನಿರೋಧಕ ಮಾತ್ರೆಗಳಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆ ಮೂಲಕ ಕೊರೋನಾ ವಿರುದ್ದ ಮಾತ್ರೆಗಳಿಗೆ ಅನುಮತಿ ನೀಡಿದ ಮೊದಲ ದೇಶ ಎನಿಸಿಕೊಂಡಿತು.
ಅಮೆರಿಕ ಮೂಲದ ಮರ್ಕ್ ಹಾಗೂ ರಿಡ್ಜ್ಬ್ಯಾಕ್ ಬಯೋಥೆರಪ್ಯುಟಿಕ್ಸ್ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕೋವಿಡ್ – 19 ನಿರೋಧಕ ಮಾತ್ರೆಗಳಿಗೆ ಬ್ರಿಟನ್ನ ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್ಆರ್ಎ) ಅನುಮೋದನೆ ನೀಡಿತು.

ಬಾಂಗ್ಲಾದಲ್ಲಿ ಕೋಮು ಗಲಭೆ

ಬಾಂಗ್ಲಾ ದೇಶದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ ನಡೆರದ ಬಳಿಕ ವರ್ಷಾಂತ್ಯದಲ್ಲಿ ಕೋಮುಗಲಭೆ ನಡೆದು ಅಂತರಾಷ್ಟಿçÃಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ವೇಳೆ ಅನೇಕ ಹಿಂದುಗಳು ಸಾವನ್ನಪ್ಪಿದ್ದರು. ಬಾಂಗ್ಲಾ ದೇಶದಲ್ಲಿ ಈಗಾಗಲೇ ಹಿಂದೂಗಳ ಸಂಖ್ಯೆ ಇಳಿದಿದ್ದು ದುರ್ಗಾ ಪೂಜೆಯ ದಿನ ದೇವಿಯ ವಿಸರ್ಜನೆಗೆ ಸಿದ್ದರಾಗುತ್ತಿದ್ದ ಭಕ್ತರ ಮೇಲೆ ದಾಳಿ ನಡೆದಿತ್ತು.
ಝಕಿಉರ್ ರೆಹಮಾನ್ ಲಖ್ವಿಗೆ ಪಾಕ್ ಕೋರ್ಟ್ನಿಂದ 15 ವರ್ಷ ಜೈಲು
ಮುಂಬಯಿ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತಯ್ಯಬಾ ಉಗ್ರ ಝಕಿ ಉರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು. 61 ವರ್ಷದ ಲಖ್ವಿಯನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಣೆ ಮಾಡಿದ್ದು, ಮುಂಬಯಿ ದಾಳಿ ಪ್ರಕರಣದಲ್ಲಿ 2015ರಿಂದ ಜಾಮೀನಿನ ಮೇಲೆ ಹೊರಗಿದ್ದ. ಈತನನ್ನು ಪಾಕಿಸ್ತಾನದ ಪಂಜಾಬ್ ಪ್ರ್ಯಾಂತ್ಯದ ಭಯೋತ್ಪಾದನಾ ವಿರೋಧಿ ಪೊಲೀಸರು ಬಂಧಿಸಿದ್ದರು. ಈತನಿಗೆ ಶಿಕ್ಷೆಯಾಗಿದ್ದು ಮುಂಬೈ ದಾಳಿಯಲ್ಲಿ ಬಲಿಯಾದವರ ಕುಟುಂಬದವರಿಗೆ ನಿಟ್ಟುಸಿರು ಬಿಡುವ ಸುದ್ದಿಯಾದರೂ ಅಲ್ಪಾವಧಿಯ ಶಿಕ್ಷೆಯಿಂದ ಆತ ಬಚಾವ್ ಆದ ಅನ್ನುವ ಸಂಕಟವೂ ಇದೆ.
ಮ್ಯಾನ್ಮಾರ್ ಪ್ರಧಾನಿಗೆ ಸಮಾನಾದ ಸೂಕಿ ಮೇಲೆ ಸೇನೆ ದಾಳಿ

ಮಯನ್ಮಾರ್ನಲ್ಲಿ ಜನಪ್ರಿಯತೆ ಪಡೆದಿರುವ ಪ್ರಜಾಪ್ರಭುತ್ವಕ್ಕಾಗಿ ದಶಕಗಳ ಹೋರಾಟ ನಡೆಸಿ ಜನಮನ ಗೆದ್ದಿದ್ದ ಹೋರಾಟಗಾರ್ತಿ , ಮಯನ್ಮಾರ್ ನ್ಯಾಷನಲ್ ಲೀಗ್ ಫಾರ್ ಡೆಮೊಕ್ರಸಿ ಪಕ್ಷದ ನಾಯಕಿ ಹಾಗೂ ಮಯನ್ಮಾರ್ ಸ್ಟೇಟ್ ಕೌನ್ಸಿಲರ್ ಅಂಗ್ ಸಾನ್ ಸೂಕಿಯವರನ್ನು ಸೇನೆ ಬಂಧಿಸಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕ ಸೇನೆಯ ವಿರುದ್ಧ ಪ್ರತಿಭಟನೆಯೂ ನಡೆದಿತ್ತು. ಸೇನೆ ಪ್ರತಿಭಟನೆ ಹತ್ತಿಕ್ಕಲು ದೇಶಾದ್ಯಂತ ಇಂಟರ್ನೆಟ್ ಸ್ಥಗಿತ ಮಾಡಿತ್ತು. 2021ರ ಫೆಬ್ರವರಿ ತಿಂಗಳಲ್ಲಿ ನಡೆದ ಈ ವಿದ್ಯಮಾನ ವರ್ಷದ ಪ್ರಮುಖ ವಿದ್ಯಮಾನಗಳಲ್ಲಿ ಒಂದಾಗಿದೆ.

ನೇಪಾಳ ಪ್ರಧಾನಿಯನ್ನೇ ಉಚ್ಛಾಟಿಸಿದ್ದ ಪಕ್ಷ

ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ಪ್ರಧಾನಿಯನ್ನೇ ಉಚ್ಚಾಟಿಸಿದ ಘಟನೆ ನೇಪಾಳದಲ್ಲಿ ವರದಿಯಾಗಿತ್ತು. ಪಕ್ಷದ ಭಿನ್ನಮತೀಯ ಗುಂಪು ಕೇಂದ್ರೀಯ ಸಮಿತಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದೆ. ಸಂಸತ್ತನ್ನು ವಿಸರ್ಜಿಸಿ ಹೊಸ ಚುಣಾವಣೆಗೆ ಆದೇಶ ನೀಡಿದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಮೊದಲು ಪಕ್ಷವೇ ತಮ್ಮ ಪ್ರಧಾನಿಯ ವಿರುದ್ದ ಪ್ರತಿಭಟಿಸಿತ್ತು. ಬಳಿಕ ಓಲಿಯವರನ್ನೇ ಹೊರ ಹಾಕಿ ಸುದ್ದಿಯಾಗಿತ್ತು.

ಇಸ್ರೇಲ್ – ಪ್ಯಾಲಿಸ್ತೇನ್ ಯುದ್ದವಿರಾಮ

ಶತ್ರುರಾಷ್ಟ್ರಗಳೆಂದೇ ಬಣ್ಣಿತವಾಗಿದ್ದ ಸದಾ ಯುದ್ದಗಳಿಂದಲೇ ಸುದ್ದಿಯಾಗುತ್ತಿದ್ದ ಇಸ್ರೇಲ್ -ಪ್ಯಾಲೆಸ್ತೇನ್ ನಡುವೆ ಕಳೆದ ಮೇ ತಿಂಗಳಲ್ಲಿ ಯುದ್ದ ವಿರಾಮ ಘೋಷಣೆಯಾಗಿದ್ದೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ದಿ. ಜೆರುಸೆಲಂನಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳಿಗೆ ಬ್ರೇಕ್ ಬಿದ್ದಿದ್ದರೂ ಹಮಾಸ್ ಬಂಡುಕೋರರು ಸಂಪೂರ್ಣ ಶಾಂತಿಗೆ ಒಪ್ಪಿಗೆ ನೀಡಿಲ್ಲ. ಇಷ್ಟಾದರೂ ಎರಡೂ ರಾಷ್ಟ್ರಗಳು ಕದನವಿರಾಮ ಘೋಷಿಸಿ ಬಂದೂಕು ಬದಿಗಿಟ್ಟಿದ್ದು ಒಂದೊಳ್ಳೆಯ ಬೆಳವಣಿಗೆ ಎನ್ನಬಹುದು.

ಯುರೋಪಿನ ಪ್ರವಾಹ ಪಡೆದ 93 ಬಲಿ

ಜುಲೈ ತಿಂಗಳಲ್ಲಿ ಜರ್ಮನಿ ಮತ್ತು ಬೆಲ್ಜಿಯಂನ ಗಡಿಭಾಗದಿಂದ ಧುತ್ತೆಂದು ಬಂದ ಪ್ರವಾಹಕ್ಕೆ ಎರಡೂ ದೇಶಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದವು. ಬೆಲ್ಜಿಯಂಗಿಂತಲೂ ಜರ್ಮನ್ ಅಧಿಕ ಪ್ರಮಾಣದಲ್ಲಿ ಹಾನಿಗೊಳಗಾಯಿತು.
ಅಮೇರಿಕಾ ನೂತನ ಅಧ್ಯಕ್ಷ ಜೋ ಬಿಡನ್ ಭೇಟಿಯಾಗಲು ತೆರಳಿದ್ದ ಜರ್ಮನಿಯ ಎಂಜೆಲಾ ಮಾರ್ಕೆಲ್ ಅಲ್ಲಿಂದಲೇ ಘಟನೆಯ ವಿಸ್ಕೃತ ವರದಿ ಪಡೆದಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆದಿದ್ದರು.
ಕ್ವೀನ್ ಎಲಿಜಬೆತ್ ಪತಿ ವಿಧಿವಶ.
ಬ್ರಿಟನ್ನಿನ ರಾಣಿ ಕ್ವೀನ್ ಎಲಿಜಬೆತ್ ಅವರ ಪತಿ ಫಿಲಿಪ್ ಡ್ಯೂಕ್ ಆಫ್ ಎಡಿನ್ಬರ್ಗ್ ಎಪ್ರಿಲ್ ತಿಂಗಳಲ್ಲಿ ವಿಧಿವಶರಾದರು. ಗ್ರೀಕ್ ರಾಜಮನೆತನದ ಫಿಲಿಪ್ 1947ರಲ್ಲಿ ರಾಣಿಯನ್ನು ಮದುವೆಯಾಗಿದ್ದರು.

ಸುಯೇಜ್ ಕಾಲುವೆಯಲ್ಲಿ ಕೈ ಕೊಟ್ಟ ಎವರ್ ಗಿವನ್

ಜಪಾನ್ ಮಾಲಿಕತ್ವದ ಎವರ್ ಗಿವನ್ ಹಡಗು ಸುಯೇಜ್ ಕಾಲುವೆಯಲ್ಲಿ ಸಿಲುಕಿಕೊಂಡು 120ಕ್ಕೂ ಅಧಿಕ ಹಡಗುಗಳು ಸಾಲುಗಟ್ಟಿ ನಿಂತಿದ್ದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು.
ಸುಮಾರು ಎರಡು ವಾರಗಳ ಕಾಲ ನಿಂತಿದ್ದ ಹಡಗಿನಿಂದ ದಿನಕ್ಕೆ 9.6 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಇಂಡೋನೇಷ್ಯಾ ವಿಮಾನ ದುರಂತ.

ಇಂಡೋನೇಷ್ಯಾದ ಜಕಾರ್ತದಿಂದ ಹೊರಟ ಶ್ರೀ ವಿಜಯಾ ಎನ್ನುವ ಹಡಗು ಜನವರಿಯಲ್ಲಿ ಜಾವಾ ಸಮುದ್ರದಲ್ಲಿ ಪಥನವಾಗಿತ್ತು. ನಾಪತ್ತೆಯಾಗಿ 12ಗಂಟೆಗಳ ಬಳಿಕ ವಿಮಾನದ ಅವಶೇಷ ಪತ್ತೆಯಾಗಿತ್ತು. ವಿಮಾನದಲ್ಲಿದ್ದ ಅಷ್ಟೂ ಮಂದಿ ಅಸುನೀಗಿದ್ದರು.

ಹೆಲಿಕಾಪ್ಟರ್ ಅಪಘಾತದಿಂದ ದೂರವಾದ ರಾವತ್

ವರ್ಷಾಂತ್ಯದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದರು. ಪತ್ನಿ ಹಾಗೂ ಸಿಬ್ಬಂದಿಯೊಂದಿಗೆ MI-17 V5 ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ತಮಿಳುನಾಡಿನ ಕೂನುರು ಎಂಬಲ್ಲಿ ಅಪಘಾತಕ್ಕೀಡಾಗಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top