fbpx
ಕ್ರಿಕೆಟ್

ಪಟ್ಟು ಹಿಡಿದ ಕೋಹ್ಲಿ, ಜುಟ್ಟು ಹಿಡಿದ ಕ್ರಿಕೆಟ್ ಮಂಡಳಿ

ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆ ಕಳೆದ ಒಂದಿಷ್ಟು ದಿನಗಳಿಂದ ಮಹತ್ವದ ತಿರುವುಗಳನ್ನು ಪಡೆದುಕೊಂಡಿದ್ದು ನಿನ್ನೆ ಅಂದರೆ ಬುಧವಾರ ಬಿಸಿಸಿಐ ಹಾಲಿ ಕ್ಯಾಪ್ಟನ್ಗೆ ೪೮ ಗಂಟೆಗಳ ಕಾಲ ಟೈಂ ಕೊಟ್ಟು ಕೆಳಗಿಳಿಸಿದ ವರದಿಯನ್ನು ಪಿಟಿಐ ವರದಿ ಮಾಡಿದೆ.

ಏಕದಿನ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾವಣೆ ಕಳೆದ ಕೆಲ ದಿನಗಳಿಂದ ಬಿಸಿ ಬಿಸಿ ಚರ್ಚೆಗೊಳಪಡುತ್ತಿದ್ದು ನಿರೀಕ್ಷೆಯಂತೆ ಆ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಕೋಹ್ಲಿ ಅವರ ಅಗ್ರೆಸೀವ್ ನಡೆ ಮತ್ತು ಆವೇಶಭರಿತ ವರ್ತನೆಗಳಿಂದ ಮೈದಾನಗಳಲ್ಲಿ ಸುದ್ದಿಯಾಗಿದ್ದರು ಮತ್ತು ಇತ್ತೀಚಿನ ದಿನಗಳಲ್ಲಿ ಕೋಹ್ಲಿ ನಾಯಕನಾಗಿ ವೈಫಲ್ಯವನ್ನೂ ಅನುಭವಿಸಿದ್ದರು. ಐಪಿಎಲ್ನಲ್ಲಿ ಆರ್.ಸಿ.ಬಿ ತಂಡವನ್ನು ಪ್ರತಿನಿಧಿಸುತ್ತಿದ್ದ ಕೋಹ್ಲಿ ಇತ್ತೀಚೆಗೆ ನಿರಂತರ ಸೋಲಿನಿಂದ ಬೇಸತ್ತು ಅಲ್ಲಿಯೂ ನಾಯಕತ್ವದಿಂದ ಹಿಂದೆ ಸರಿದಿದ್ದರು.
ಪಿಟಿಐ ಮಾಡಿರುವ ವರದಿಯನ್ವಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋಹ್ಲಿಯವರನ್ನು ೪೮ ಗಂಟೆಗಳ ಒಳಗೆ ನಾಯಕತ್ವ ಸ್ಥಾನದಿಂದ ಕೆಳಗಿಳಿಯಬೇಕೆಂದು ಕೇಳಿಕೊಂಡಿತ್ತ0ತೆ. ಆದರೆ ಇದಕ್ಕೆ ಸೊಪ್ಪು ಹಾಕದ ಕೋಹ್ಲಿ ಮೌನ ವಹಿಸಿದ್ದರು. ಇದೀಗ ಮಂಡಳಿ ೪೮ ಗಂಟೆಯ ಬಳಿಕ ಏಕದಿನ ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದೆ.
ಕೋಹ್ಲಿ ಧೋನಿ ಬಳಿಕ ಭಾರತೀಯ ಕ್ರಿಕೆಟ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ನಾಯಕ. ಆದರೆ ಇಲ್ಲಿಯವರೆಗೆ ಒಂದೂ ಐಸಿಸ್ ಪಂದ್ಯಗಳನ್ನು ಗೆಲ್ಲದೇ ಇರುವುದು ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. ವಿರಾಟ್ ಕೊಹ್ಲಿ ನಾಯಕರಾಗಿ ಆಡಿದ ಏಕದಿನ ಪಂದ್ಯಗಳಲ್ಲಿಯೂ ರನ್ಗಳ ಹೊಳೆಯ್ನೂ ಹರಿಸಿದ್ದಾರೆ. ೨೧ ಶತಕ ಸೇರಿದಂತೆ ೭೨.೬೫ ಸರಾಸರಿಯಲ್ಲಿ ೫,೪೪೯ ರನ್ ಗಳಿಸಿದ್ದಾರೆ. ಶತಕದ ವಿಚಾರದಲ್ಲಿ ರಿಕಿ ಪಾಂಟಿAಗ್ ಬಿಟ್ಟರೆ ಎರಡನೇ ಸ್ಥಾನ ವಿರಾಟ್ ಕೊಹ್ಲಿಯದ್ದು. ಕೊಹ್ಲಿ ನಾಯಕರಾಗಿ ಐಸಿಸಿ ಟೂರ್ನಿಗಳನ್ನ ಜಯಿಸಿದೇ ಇದ್ದರೂ ತಂಡ ಆ ಟೂರ್ನಿಗಳಲ್ಲಿ ಉತ್ತಮ ಸಾಧನೆಯನ್ನಂತೂ ಮಾಡಿದೆ. ಅವರ ನಾಯಕತ್ವದಲ್ಲಿ ೨೦೧೭ರ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತು. ೨೦೧೯ರ ಓಡಿಐ ವಿಶ್ವಕಪ್ನ ಸೆಮಿಫೈನಲ್ ಹಂತ ತಲುಪಿದ್ದೂ ಕೋಹ್ಲಿ ಸಾಧನೆಯೇ.
ನಾಯಕನಾಗಿ ಒಬ್ಬ ಉತ್ತಮ ಆಟಗಾರನಾಗಿ ಇಲ್ಲಿಯವರೆಗೆ ಏಕದಿನ ಕ್ರಿಕೆಟ್ನಲ್ಲಿ ಕೋಹ್ಲಿ ಸಾಧನೆ ಅದ್ವಿತೀಯ. ಹೊಸ ನಾಯಕನ ಸಾರಥ್ಯದಲ್ಲಿ ಭಾರತ ತಂಡ ಇನ್ನಷ್ಟು ಗೆಲವುಗಳನ್ನು ಸಾಧಿಸುವಂತಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top