fbpx
ಸಮಾಚಾರ

೧೯೬೩ರ ಓಮ್ರಿಕಾನ್ ಕಥೆ ಕೇಳಿದ್ರೆ ಅಚ್ಚರಿಯಾಗ್ತೀರಾ

ಇತ್ತೀಚಿನ ದಿನಗಳಲ್ಲಿ ಕೊರೋನಾ ಆರ್ಭಟದ ಬಳಿಕ ಓಮ್ರಿಕಾನ್ ಸದ್ದು ಮಾಡುತ್ತಿದ್ದು ಬೆಂಗಳೂರಿನಲ್ಲಿ ಇತ್ತಿಚೆಗಷ್ಟೆ ೩ ಪ್ರಕರಣಗಳು ಕಾಣಿಸಿಕೊಂಡು ರಾಜ್ಯದ ಜನರನ್ನು ಭೀತಿಗೆ ತಳ್ಳಿದ್ದಂತೂ ನಿಜ. ಇದರ ನಡುವೆಯೇ ಈ ಓಮ್ರಿಕಾನ್ ೧೯೬೩ರಲ್ಲೇ ಇತ್ತು ಅಂದ್ರೆ ಒಮ್ಮೆಗೆ ಶಾಕ್ ಆಗ್ಬೇಕು. ಆದ್ರೆ ಇದು ರೋಗವಲ್ಲ ಬದಲಾಗಿ ೧೯೬೩ರಲ್ಲಿ ತೆರೆ ಕಂಡಿದ್ದ ಓಮ್ರಿಕಾನ್ ಸಿನಿಮಾ.
ಇತ್ತೀಚೆಗಷ್ಟೇ ಮಹೇಂದ್ರಾ ಕಂಪೆನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ, ಖ್ಯಾತ ಚಲನಚಿತ್ರ ನಿರ್ದೇಶಕ ರಾಮ್‌ಗೋಪಾಲವರ್ಮ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇಲ್ಲಿ ಓಮ್ರಿಕಾನ್ ವೇರಿಯಂಟ್ ಅನ್ನೋದು ಸಿನಿಮಾ ಹೆಸರು. ೧೯೬೩ರಲ್ಲಿ ಇಂತಹದ್ದೊAದು ಸಿನಿಮಾ ತೆರೆಗೆ ಬಂದಿತ್ತು ಎಂಬುದನ್ನು ರಿವೀಲ್ ಮಾಡುವ ಮೂಲಕ ಟ್ವೀಟಿಗರ ಗಮನ ಸೆಳೆದಿದ್ದಾರೆ.
ಅಂದ ಹಾಗೆ ಈ ಸಿನಿಮಾದಲ್ಲಿ ಯಾವ ವೈರಸ್ ಬಗ್ಗೆಯೂ ಕಥೆ ಇಲ್ಲ. ಏಲಿಯನ್‌ಗಳ ಕುರಿತಾದ ಈ ಚಿತ್ರ ಭೂಮಿಯ ಬಗ್ಗೆ ಏಲಿಯನ್‌ಗಳಿಗಿರುವ ಕುತೂಹಲವನ್ನು ಕೆದಕುತ್ತಾ ಹೋಗುವ ಸಾಗುತ್ತದೆ. ಸದ್ಯ ಈ ಚಿತ್ರದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top