fbpx
ಸಮಾಚಾರ

ಮೊದಲ ಬಾರಿಗೆ ಮುದ್ದು ಕಂದನ ಫೋಟೋ ಹಂಚಿಕೊಂಡ ನಟಿ ಪ್ರೀತಿ ಜಿಂಟಾ

ಬಾಲಿವುಡ್ ಖ್ಯಾತ ನಟಿ, ಪಂಜಾಬ್ ಐಪಿಎಲ್ ತಂಡದ ಒಡತಿ ಪ್ರೀತಿ ಜಿಂಟಾ ಸದ್ಯ ತಾಯ್ತನದ ಸುಂದರ ಕ್ಷಣಗಳನ್ನ ಅನುಭವಿಸುತ್ತಿದ್ದಾರೆ. ತಾವು ಬಾಡಿಗೆ ತಾಯ್ತನದ ಮೂಲಕ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ಅವಳಿ ಮಕ್ಕಳಿಗೆ ತಾಯಿಯಾಗಿದ್ದ ವಿಚಾರವನ್ನು ಇತ್ತೀಚಿಗೆ ತಾನೇ ಪ್ರೀತಿ ಜಿಂಟಾ ತಿಳಿಸಿದ್ದರು. ಈಗ ಮೊದಲ ಬಾರಿಗೆ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಪ್ರೀತಿ ಜಿಂಟಾ ಮೊದಲ ಬಾರಿಗೆ ತಮ್ಮ ಮಗುವಿನ ಜೊತೆಗಿರುವ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. “ಬರ್ಪ್ ಬಟ್ಟೆಗಳು, ಡೈಪರ್‌ಗಳು ಮತ್ತು ಮಕ್ಕಳು.. ಐ ಌಮ್​ ಲವಿಂಗ್​ ಇಟ್​ ಆಲ್​” ಎಂದು ಬರೆದುಕೊಂಡಿದ್ದಾರೆ. ಇನ್ನು ಪ್ರೀತಿ ಜಿಂಟಾ ಅವರ ಈ ಪೋಟೋಗೆ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್ಸ್ ಒತ್ತಿದ್ದಾರೆ..

 

 

ಪ್ರೀತಿ ಜಿಂಟಾ ಕಳೆದ ನವೆಂಬರ್ ನಲ್ಲಿ ಅವಳಿ ಮಕ್ಕಳಿಗೆ ಬಾಡಿಗೆ ತಾಯ್ತನದ ಮೂಲಕ ಅಮ್ಮನಾಗಿದ್ದರು. ಗಂಡು ಮಗುವಿಗೆ ಜಯ್ ಎಂದು ಹಾಗೂ ಹೆಣ್ಣು ಮಗುವಿಗೆ ರೀನಾ ಎಂದೂ ನಾಮಕರಣ ಮಾಡಿದ್ದರು.

2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೆನೆ ಗುಡ್ ಇನಫ್​ ಅವರು ಪ್ರೀತಿಸಿ ವಿವಾಹವಾಗಿದ್ದರು. ಅದಕ್ಕೂ ಮೊದಲು ಐದು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿದ್ದರು. ಮದುವೆಯ ನಂತರ ಪತಿಯ ಜೊತೆ ವಿದೇಶದಲ್ಲಿ ನೆಲೆಸಿದ್ದ ಪ್ರೀತಿ ಜಿಂಟಾ ಆಗಾಗ ಭಾರತಕ್ಕೆ ಬರುತ್ತಿದ್ದರು. ಇತ್ತೀಚೆಗಷ್ಟೆ ಲಡಾಖ್​ಗೆ ಪ್ರವಾಸಕ್ಕೆಂದು ಬಂದಿದ್ದರು. ಈಗ ಮದುವೆಯಾಗಿ ಐದು ವರ್ಷಗಳ ನಂತರ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top