fbpx
ಸಮಾಚಾರ

ಗಂಧದಗುಡಿ ಟೀಸರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ: ಹೇಳಿದ್ದೇನು ಗೊತ್ತಾ?

ಕನ್ನಡ ನಾಡಿನ ಅರಣ್ಯ ಸಂಪತ್ತಿನ ಕುರಿತಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಯಾರಿಸಿದ್ದ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದರು. ಕರ್ನಾಟಕದ ಹಲವು ಸುಂದರ ಪರಿಸರಗಳು, ಕಾಡುಗಳು, ಗುಡ್ಡ, ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು, ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ ಚಿತ್ರವಿದು. ಅದನ್ನು ಕನ್ನಡಿಗರಿಗೆ ತೋರಿಸಬೇಕು ಎಂಬ ಕನಸು ಹೊತ್ತಿದ್ದ ಪುನೀತ್ ಆ ಕನಸು ನನಸಾಗುವ ಮೊದಲೇ ವಿಧಿಯ ಆಟಕ್ಕೆ ಬಲಿಯಾಗಿದ್ದರು.

 

 

ಪುನೀತ್ ನಿಧನರಾದರೆಂದು ಗಂಧದ ಗುಡಿಯ ಕೆಲಸ ನಿಲ್ಲಲಿಲ್ಲ. ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರುನಾಡಿನ ಪ್ರಕೃತಿ ಸೌಂದರ್ಯವನ್ನು ಮನಮೋಹಕವಾಗಿ ಸೆರೆ ಹಿಡಿದಿರುವ ಈ ಡಾಕ್ಯುಮೆಂಟರಿಯ ಕ್ಯಾಮೆರಾ ವರ್ಕ್, ಹಿನ್ನಲೆ ಸಂಗೀತ ಮುಂತಾದ ವಿಚಾರಗಳು ನೆಟ್ಟಿಗರ ಗಮನಸೆಳೆದಿದೆ. ಈಗ ಟೀಸರ್ ಬಗ್ಗೆ ಜನಪ್ರಿಯ ನಿರ್ದೇಶಕ ರಾಜಮೌಳಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಟೀಸರ್ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಗಳಿ ಟ್ವೀಟ್ ಮಾಡಿರುವ ರಾಜಮೌಳಿ “ಗಂಧದಗುಡಿ ಟೀಸರ್ ಅದ್ಭುತವಾಗಿ ಕಾಣುತ್ತಿದೆ. ಕರ್ನಾಟಕದ ಮಣ್ಣಿನ ಬಗ್ಗೆ ಇಂತಹ ಡಾಕ್ಯುಮೆಂಟರಿ ಮಾಡಿ ಜನರನ್ನು ತಲುಪುವುದು ಅಪ್ಪು ಅವರ ಕನಸಾಗಿತ್ತು. ಅಪ್ಪು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕನಸು ನನಸಾಗುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top