fbpx
ಸಮಾಚಾರ

ಯಶ್- ರಾಧಿಕಾ ದಂಪತಿಗೆ ಈ ದಿನ ತುಂಬಾ ಸ್ಪೆಷಲ್: ವಿಶೇಷವಾಗಿ ವಿಶ್​ ಮಾಡಿದ ನಟಿ

ಕನ್ನಡ ಚಿತ್ರದ ಮಟ್ಟಿಗೆ ಕ್ಯೂಟ್ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ಕಿರುತೆರೆಯಲ್ಲಿ ಒಟ್ಟಾಗಿ ನಟಿಸಿ, ನಂತರ ಹಿರಿತೆರೆಗೆ ಬಂದು ಮಿಂಚಿದ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆ ಆದ ರಾಧಿಕಾ ಮತ್ತು ಯಶ್ ಸದ್ಯ ಇಬ್ಬರು ಮಕ್ಕಳ ಪೋಷಕರಾಗಿ ಕೌಟುಂಬಿಕ ಜೀವನದಲ್ಲಿ ಸಂತೋಷದಿಂದ ಜೀವನಸಾಗಿಸುತ್ತಿದ್ದಾರೆ. ಇಂಥಾ ಯಶ್ ರಾಧಿಕಾ ದಂಪತಿಗೆ ಇಂದು ತುಂಬಾ ವಿಶೇಷವಾದ ದಿನ. ಏನದು ವಿಶೇಷ ಅಂತೀರಾ? ಮುಂದೆ ಓದಿ

 

 

ಯಶ್ ಮತ್ತು ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 5 ವರ್ಷ ಪೂರೈಸಿದೆ. ಐದನೇ ವರ್ಷದ ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿರುವ ರಾಧಿಕಾ ಪಂಡಿತ್ ವಿಶೇಷ ದಿನದ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಅಲ್ಲದೆ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಇನ್‍ಸ್ಟಾದಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್ ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದು, ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಯಶ್ ಗೆ ಅರ್ಪಿಸಿದ್ದಾರೆ. ‘ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಮತ್ತೆ ತಳ್ಳುವವರು, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ, ನೀವು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತೆ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ’ ಎಂದು ಬರೆದು ಯಶ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್(Wish) ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top