fbpx
ಸಮಾಚಾರ

“ಕೊನೆ ಕ್ಷಣದಲ್ಲಿ ಬಿಪಿನ್‌ ರಾವತ್‌ ಅವ್ರು ಕುಡಿಯಲು ನೀರು ಕೇಳಿದ್ದರು” ಪ್ರತ್ಯಕ್ಷದರ್ಶಿ ಹೇಳಿದ್ದೇನು?

ತಮಿಳು ನಾಡಿನ ಊಟಿ ಸಮೀಪದಲ್ಲಿ ಉಂಟಾದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಒಟ್ಟು 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಅನಾಹುತದಲ್ಲಿ ಅದೃಷ್ಟವಶಾತ್ ರೀತಿಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದಿದ್ದು ಸದ್ಯ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಸಾವಿಗೆ ಕಾರಣವಾದ ಹೆಲಿಕಾಪ್ಟರ್‌ ದುರಂತದ ಸ್ಥಳದಲ್ಲಿ (ತಮಿಳುನಾಡು ನೀಲಗಿರಿ ಅರಣ್ಯ ಪ್ರದೇಶ), ರಾವತ್‌ ಅವರು ಜೀವಂತವಾಗಿದ್ದನ್ನು ನೋಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿನ್ನೆ ಹೆಲಿಕಾಪ್ಟರ್‌ ದುರಂತವಾದಾಗ ಬಿಪಿನ್‌ ರಾವತ್‌ ಅವರ ಸ್ಥಿತಿ ಗಂಭೀರವಾಗಿತ್ತು. ಆ ಸಂದರ್ಭದಲ್ಲಿ ಅವರು ಇನ್ನೂ ಬದುಕಿದ್ದರು ಎಂದು ಘಟನಾ ಸ್ಥಳದ ಬಳಿಯ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡಿರುವ ಸ್ಥಳೀಯ ಶಿವ ಕುಮಾರ್‌ ತಿಳಿಸಿದ್ದಾರೆ. “ಹೆಲಿಕಾಪ್ಟರ್‌ ಪತನವಾದ ಸ್ಥಳಕ್ಕೆ ತಕ್ಷಣ ಓಡಿ ಹೋದೆವು. ಅಲ್ಲಿ ಮೂವರ ಮೃತದೇಹಗಳು ಕಂಡವು. ಆದರೆ ಒಬ್ಬರು ಇನ್ನೂ ಜೀವಂತವಾಗಿರುವುದನ್ನು ಗಮನಿಸಿದೆವು. ಅವರು ನೀರು ಬೇಕು ಎಂದು ಕೇಳುತ್ತಿದ್ದರು. ಬೆಡ್‌ಶೀಟ್‌ವೊಂದರಲ್ಲಿ ಸಿಲುಕಿದ್ದ ಅವರನ್ನು ಹೊರಗೆಡೆ ಕರೆದುಕೊಂಡೆವು. ಈ ವೇಳೆ ಸಿಬ್ಬಂದಿ ಅವರನ್ನು ರಕ್ಷಿಸಿದರು.” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top