fbpx
ಸಮಾಚಾರ

ಆರ್‌ಸಿಬಿ ಜೆರ್ಸಿ ಧರಿಸಿ ಆಡುತ್ತಾರಾ ಡೇವಿಡ್ ವಾರ್ನರ್?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಅನೇಕ ಕ್ರಿಕೆಟಿಗರ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿದೆ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ದೊಡ್ಡ ಆಟಗಾರರನ್ನೂ ಬೆಂಚ್ ಮೇಲೆ ಕೂರಿಸಿದಾಗಲೂ ಆಗೋ ನೋವು ಅಭಿಮಾನಿಗಳಿಗಷ್ಟೇ ಗೊತ್ತು. ಕಳೆದ ಐಪಿಎಲ್‌ನಲ್ಲಿ ವಾರ್ನರ್ ಅಭಿಮಾನಿಗಳು ಇಂತಹದ್ದೊAದು ನೋವು ಅನುಭವಿಸಿದ್ದರು.

ಸನ್‌ರೈಸಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಮಾಡಿದ್ದ ವಾರ್ನರ್ ಕಳೆದ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದಿಂದಾಗಿ ಬೆಂಚ್ ಕಾದಿದ್ರು. ಆದರೆ ಆ ನಂತರದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಟ ಗೌರವವನ್ನೂ ತನ್ನದಾಗಿಸಿಕೊಂಡಿದ್ದರು. ಈ ಬಾರಿ ವಾರ್ನರ್ ಹೈದರಾಬಾದ್ ತಂಡಕ್ಕೆ ಆಡದೇ ಇರುವುದು ಬಹುತೇಕ ಖಚಿತವಾಗಿರುವುದರಿಂದ ವಾರ್ನರ್ ಯಾವ ತಂಡದಲ್ಲಿ ಆಡಬಹುದೆಂಬುದು ಎಲ್ಲರೂ ಕಾಯುತ್ತಿರುವ ವಿಚಾರ.

ಅಂದ್ಹಾಗೆ ಆರ್‌ಸಿಬಿ ತಂಡದಲ್ಲಿ ಈಗಾಗಲೇ ಕ್ಯಾಪ್ಟನ್ ಮತ್ತು ಎಬಿಡಿ ಸ್ಥಾನ ತುಂಬಬಲ್ಲ ಆಟಗಾರರಿಗಾಗಿ ಹುಡುಕಾಟ ನಡೆಯುತ್ತಿದ್ದು ಆ ಸ್ಥಾನ ತುಂಬಲು ವಾರ್ನರ್‌ಗೆ ಎಲ್ಲಾ ಅರ್ಹತೆ ಇರುವುದರಿಂದ ವಾರ್ನರ್ ಅವರನ್ನು ಖರೀದಿಸುವ ಸಾಧ್ಯತೆಗಳಿವೆ. ವಾರ್ನರ್ ಈಗಾಗಲೇ ಉತ್ತಮ ಫಾರ್ಮ್ನಲ್ಲಿರುವುದರಿಂದ ಲಕ್ನೋ ಮತ್ತು ಅಹಮದಾಬಾದ್ ತಂಡಗಳೂ ರೇಸ್‌ನಲ್ಲಿವೆ. ಅಂತಿಮವಾಗಿ ವಾರ್ನರ್ ಯಾವ ತಂಡವನ್ನು ಆಯ್ದುಕೊಳ್ಳುತ್ತಾರೆ ಎಂಬುದು ಅಧಿಕೃತವಾಗಿ ತಿಳಿಯಬೇಕೆದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top