fbpx
ಸಮಾಚಾರ

83 ಸಿನಿಮಾ: ದೀಪಿಕಾ ಪಡುಕೋಣೆ ವಿರುದ್ಧ ದೂರು: ಏಕೆ ಗೊತ್ತಾ?

ಭಾರತೀಯ ಕ್ರಿಕೆಟ್ ನ ಅತ್ಯಂತ ಶ್ರೇಷ್ಠ ವಿಜಯ ಎಂದೇ ಬಣ್ಣಿಸಲಾಗುವ 1983 ವಿಶ್ವಕಪ್ ಕುರಿತಾಗಿ ಮಾಡಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಡಿ.24ರಂದು ತೆರೆ ಕಾಣಲಿದೆ. ಈ ಮಧ್ಯೆ ಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ಚಿತ್ರ ನಿರ್ಮಾಪಕರ ತಂಡದಲ್ಲಿ ನಟ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಕೂಡ ಇದ್ದು, ಅವರ ಮೇಲೂ ದೂರು ದಾಖಲಾಗಿದೆ. ಯುಎಇ ಮೂಲದ ಹೂಡಿಕೆದಾರರೊಬ್ಬರು ಚಿತ್ರದ ನಿರ್ಮಾಪಕರ ವಿರುದ್ಧ ಮುಂಬೈನ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

83 ಸಿನಿಮಾದಲ್ಲಿ ₹16 ಕೋಟಿ ಹೂಡಿಕೆ ಮಾಡಿದ್ದಾಗಿ ಅವರು ಆರೋಪಿಸಿರುವ ದೂರುದಾರ ಅದರಲ್ಲಿ ವಂಚನೆ ಎಸಗಲಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top