fbpx
ಸಮಾಚಾರ

ಪುನೀತ್ ನೆನಪಲ್ಲಿ ಅನ್ನ ದಾಸೋಹ, ೫ರುಪಾಯಿ ಇಡ್ಲಿ, ಅನ್‌ಲಿಮಿಟೆಡ್ ಊಟ

ಪುನೀತ್ ರಾಜ್ ಕುಮಾರ್ ಓರ್ವ ನಾಯಕ ನಟನಾಗಿ, ಪ್ರತಿಭಾನ್ವಿತ ಕಲಾವಿದನಾಗಿ ಮಾತ್ರ ಕನ್ನಡಿಗರಿಗೆ ಚಿರಪರಿಚಿತರಲ್ಲ. ಅವರ ಅನೇಕ ಸಾಮಾಜಿಕ ಕಾರ್ಯಗಳಿಂದಲೂ ಈ ಹೃದಯವಂತ ಎಲ್ಲರ ಗಮನ ಸೆಳೆದಿದ್ದರು. ಅಪ್ಪು ಇರುವಷ್ಟು ದಿನ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆಯ ನಂತರ ಅನೇಕರು ಅವರ ನೆನಪಿನಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಅನೇಕರು. ಅನೇಕರು ಅಪ್ಪು ಮಾಡುತ್ತಿರುವ ಕಾರ್ಯಗಳನ್ನು ತಾವು ಮುಂದುವರೆಸಿಕೊAಡು ಹೋಗುವುದಾಗಿ ಹೇಳಿದ್ದರು. ಅನೇಕರು ಅಪ್ಪುವಿನಿಂದಲೇ ಸ್ಪೂರ್ತಿ ಪಡೆದ್ರು.

ಆದರೆ ಇಲ್ಲೊಬ್ಬರು ಒಂದು ವಿಶೇಷ ಸಾಮಾಜಿಕ ಕಾರ್ಯದ ಮೂಲಕ ಅಪ್ಪು ನೆನಪನ್ನು ಚಿರವಾಗಿಸಲು ಪ್ರಯತ್ನ ಪಡುತ್ತಿದ್ದಾರೆ. ಅಂದಹಾಗೆ ಇವರು ಮಾಡ ಹೊರಟಿದ್ದು ಒಂದಿಷ್ಟು ಜನರ ಹೊಟ್ಟೆ ತಣಿಸುವ ಕೆಲಸ. ಇವರು ಮಾಡುತ್ತಿರೋದೇನು? ಯಾರ ಹಸಿವು, ಹೇಗೆ ತಣಿಸುತ್ತಾರೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಬೆಂಗಳೂರಿನಲ್ಲಿ ಪಾಪುರೆಡ್ಡಿ ಪಾಳ್ಯದಲ್ಲಿ ಅಪ್ಪು ಹೆಸರಲ್ಲಿ ಶುರವಾಗಿರುವುದೇ ಅಪ್ಪು ಹೋಟೆಲ್. ಅಪ್ಪು ಅಪ್ಪಟ ಅಭಿಮಾನಿಯಾಗಿರುವ ಹೋಟೆಲ್ ಮಾಲಿಕರು ಅನೇಕ ದಿನಗಳಿಂದ ಹೋಟೆಲ್ ತೆರೆಯಬೇಕು ಅಂತ ಅಂದುಕೊoಡಿದ್ದರoತೆ. ಆದರೆ ಇದೇ ಹೊತ್ತಿಗೆ ಅಪ್ಪು ನಮ್ಮನ್ನಗಲಿದರು. ಹಾಗಾಗಿ ಅಪ್ಪು ನೆನಪಿನಲ್ಲಿ ಅಪ್ಪು ಹೋಟೆಲ್ ಅಂತಲೇ ತೆರೆದರು. ಈಗ ಅಪ್ಪು ಹೆಸರಿನಲ್ಲಿ ಪ್ರತೀದಿನ ದಾಸೋಹ ನಡೆಯುತ್ತಲಿದೆ. ಈಗಾಗಲೇ ಅನೇಕ ಸಿನಿಮಾ ನಿರ್ದೇಶಕರು, ನಟರು ಅಪ್ಪು ಹೋಟೆಲ್ ರುಚಿ ಸವಿದಿದ್ದಾರೆ.

ಏನಿದರ ವಿಶೇಷತೆ?

ಈ ಹೋಟೆಲ್ ಅತ್ಯಂತ ಕಡಿಮೆ ಬೆಲೆಯ ಊಟ ಮತ್ತು ತಿನಿಸುಗಳಿಗೆ ಹೆಸರುವಾಸಿಯಾಗಿದೆ.ಇಲ್ಲಿ ಇಡ್ಲಿ ಕೇವಲ ೫ ರುಪಾಯಿಗೆ ದೊರೆತ್ರೆ ೫೦ರುಪಾಯಿಗೆ ಸಾಕೆನಿಸುವಷ್ಟು ಊಟ ದೊರೆಯುತ್ತದೆ. ಇನ್ನು ಈ ಹೋಟೆಲ್ ಕಂಪ್ಲೀಟಾಗಿ ಹೆಣ್ಣುಮಕ್ಕಳಿಂದಲೇ ನಿರ್ವಹಿಸಲ್ಪಡುತ್ತದೆ.ಪುನೀತ್‌ರಂತಹ ಮೇರು ನಟರ ನೆನಪಿನಲ್ಲಿ ಎಲ್ಲರ ಹೊಟ್ಟೆ ತುಂಬಿಸಬೇಕೆAದು ಇವರು ಮಾಡಿರುವ ಆಲೋಚನೆ ನಿಜಕ್ಕೂ ಮೆಚ್ಚಲೇ ಬೇಕು. ಇನ್ನಷ್ಟು ಕನ್ನಡಿಗರು ಇದರಿಂದ ಸ್ಪೂರ್ತಿ ಪಡೆದು ಇಂತಹ ಸಾಮಾಜಿಕ ಕಾರ್ಯಗಳನ್ನು ನಡೆಸುವಂತಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top