fbpx
ಸಮಾಚಾರ

“ಚಾನೆಲ್ಸ್ ಅಂದರೆ ಏನು ?” ಕನ್ನಡ ನ್ಯೂಸ್ ಚಾನೆಲ್ ಗಳ ವಿರುದ್ಧ ಮುಟ್ಟಿನೋಡಿಕೊಳ್ಳುವ ಹಾಗೆ ಚಾಟಿ ಬೀಸಿದ ಕ್ರೇಜಿ ಸ್ಟಾರ್ ರವಿಚಂದ್ರನ್: ವಿಡಿಯೋ ವೈರಲ್

ನಮ್ಮದೇ ನೆಲದಲ್ಲಿ ಹುಟ್ಟಿ ಬೆಳೆದಿರುವ ಕೆಲವು ಸುದ್ದಿ ವಾಹಿನಿಗಳು ಸಮಾಜಕ್ಕೆ ಕಂಟಕವಾಗುತ್ತಿದೆಯೇ? ಇತ್ತೀಚೆಗೆ ನಡೆಯುತ್ತಿರೋ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರವೇ ಪಕ್ಕಾ ಆಗುವಂತಿದೆ.. TRP ಎಂಬ ಹುಚ್ಚನ್ನು ತಲೆಗೆ ತುಂಬಿಸಿಕೊಂಡಿರುವ ಕೆಲವು ಕನ್ನಡದ ನ್ಯೂಸ್ ಚಾನೆಲ್’ಗಳು ಇಲಿಯನ್ನು ಹುಲಿಗೆ ಹೋಲಿಸಿ ಸುಳ್ಳುಗಳನ್ನೇ ತಮ್ಮ ಬಂಡವಾಳಗಳನ್ನಾಗಿ ಮಾಡಿಕೊಂಡು ಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಾದ್ಯಂತ ದಂತಕತೆಗಳೇ ಕಾಣಸಿಗುತ್ತವೆ..

 

 

ಟಿಆರ್ಪಿ ಪೈಪೋಟಿಗೆ ಬಿದ್ದು, ಬೇಕಿಂಗ್ ನ್ಯೂಸ್ ದಾಹಕ್ಕೆ ಸಿಲುಕಿರುವ ಬಹುತೇಕ ನ್ಯೂಸ್ ಚಾನೆಲ್ ಗಳು ಇಂದು ಜನರಲ್ಲಿ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.. ಅಸಲಿ ಸುದ್ಧಿಗಿಂತ ಬೇಡದ ಅನಾವಶ್ಯಕ ಬಿಲ್ಡಪ್ಪು ಕರ್ಕಶಕರವಾದ ಬಿಜಿಎಮ್, ಕಿರಿಕಿರಿ ಎನಿಸುವ ಹೆಡ್ ಲೈನ್ಸು, ಚಿಂಟು ಆಂಕರ್ ಗಳ ಕಿರುಚಾಟ ಆರಚಾಟ ಹೀಗೆ ನ್ಯೂಸ್ ಚಾನೆಲ್ ಗಳ ಅಟಾಟೋಪಗಳನ್ನ ಕನ್ನಡಿಗರು ಸಹಿಸಿಕೊಂಡು ಸಾಕುಸಾಕಾಗಿದೆ.

ಇಂಥಾ ಕಚಡಾ ನ್ಯೂಸ್ ಚಾನೆಲ್ ಗಾಲ ವಿರುದ್ಧ ಕನ್ನಡದ ಮೇರು ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿಡಿದೆದ್ದಿದ್ದಾರೆ. ಹೌದು, ರವಿಮಾಮ ಕನ್ನಡ ಸುದ್ದಿವಾಹಿನಿಗಳ ವಿರುದ್ಧ ಕಿಡಿಕಾರಿದ್ದು ಅವುಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಭಂದಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ರವಿಚಂದ್ರನ್ ಅವರ ಮಾತುಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ಅಷ್ಟಕ್ಕೂ ರವಿಚಂದ್ರನ್ ಅವರು ನ್ಯೂಸ್ ಚನೆ ಗಾಲ ಬಗ್ಗೆ ಹೇಳಿದ್ದೇನು ಅಂತೀರಾ? ಇಲ್ಲಿ ಆ ವಿಡಿಯೋ ಅವರ ಮಾತುಗಳಲ್ಲಿಯೇ ಕೇಳಿ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top