fbpx
ಸಮಾಚಾರ

ಬ್ಲ್ಯಾಕ್ ಬಾಕ್ಸ್ ಒಳಗಿರುವುದೇನು? ಸೇನಾ ಹೆಲಿಕಾಪ್ಟರ್ ಅವಘಡದ ಮಾಹಿತಿ ತೆಗೆಯೋದಾದ್ರು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಅನೇಕ ಸಲ ವಿಮಾನ ಅಪಘಾತ ಸಂಭವಿಸಿದಾಗ ಅಥವಾ ಹೆಲಕಾಪ್ಟರ್ ದುರಂತ ಸಂಭವಿಸಿದಾಗ ಕೇಳಿ ಬರುವ ಹೆಸರು ಅದು ಬ್ಲಾö್ಯಕ್ ಬಾಕ್ಸ್. ಇತ್ತೀಚೆಗೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅವಘಡಕ್ಕೀಡಾಗಿತ್ತು. ಅವಘಡ ಹೇಗೆ ಸಂಭವಿಸಿತು ಅನ್ನೋದು ಕೌತುಕದ ಪ್ರಶ್ನೆಯಾಗಿಯೇ ಉಳಿದಿತ್ತು. ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆಯಾದರೆ ಈ ವಿಚಾರ ತಿಳಿದುಕೊಳ್ಳಬಹುದೆಂದು ಅನೇಕರು ಮಾತನಾಡಿದ್ದನ್ನು ಕೇಳಿರಬಹುದು. ಹಾಗಾದರೆ ಈ ಬ್ಲ್ಯಾಕ್ ಬಾಕ್ಸ್ ಎಂದರೇನು? ಇದರಿಂದ ಅವಘಡ ಹೇಗೆ ಸಂಭವಿಸಿತು ಅಂತ ಹೇಗೆ ತಿಳಿದುಕೊಳ್ಳಲಾಗುತ್ತದೆ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಬ್ಲ್ಯಾಕ್ ಬಾಕ್ಸ್ ಅಂದ್ರೆ ಎಲೆಕ್ಟಾçನಿಕ್ ಡೆಟಾ ರಿಕಾರ್ಡಿಂಗ್ ಡಿವೈಸ್. ಸಂಪೂರ್ಣ ಫ್ಲೆöÊಟ್ ಡೆಟಾ ಹೊಂದಿರುವ ಬ್ಲ್ಯಾಕ್ ಬಾಕ್ಸ್ . ವಿಮಾನ ಅವಘಡ ಸಂಭವಿಸುವ ಕೊನೆಯ ಘಳಿಗೆಯಲ್ಲಿ ಏನೆಲ್ಲಾ ನಡೆಯಿತು ಉದಾಹರಣೆಗೆ ಪೈಲಟ್ ಯಾರ ಜೊತೆ, ಏನು ಮಾತನಾಡಿದ್ದರು? ಯಾವ ಸಂದೇಶಗಳು ವಿಮಾನದಿಂದ ಹೊರ ಹೋಗಿವೆ? ಹೀಗೆ ಪ್ರತೀ ಇಂಚಿAಚೂ ವಿವರಗಳು ಈ ಬ್ಲಾö್ಯಕ್ ಬಾಕ್ಸ್ ಹೊಂದಿರುತ್ತದೆ.

ವಿಮಾನದಲ್ಲಿರುವ ಕಾಕ್‌ಪಿಟ್‌ನಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಅಳವಡಿಸಲಾಗಿರುತ್ತದೆ. ವಿಮಾನ ಅವಘಡಗಳು ಸಂಭವಿಸಿದಾಗ ಬೇಗ ಕಣ್ಣಿಗೆ ಕಾಣಲಿ ಎಂದು ಹಳದಿ ಬಣ್ಣದಲ್ಲಿರುತ್ತದೆ. ಇದು ವಿಮಾನದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ.
ಒಂದು ವಿಮಾನದಲ್ಲಿ ಎಷ್ಟು ಬ್ಲ್ಯಾಕ್ ಬಾಕ್ಸ್ ಇಟ್ಟಿರುತ್ತಾರೆ. ಸಾಮಾನ್ಯವಾಗಿ ಪ್ರಯಾಣಿಕರ ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್ ಕಾಣಬಹುದಾಗಿದೆ. ಒಂದು ಪ್ರಯಾಣಿಕರ ಸ್ಥಳದಲ್ಲಿದ್ದರೆ ಇನ್ನೊಂದು ಕಾಕ್‌ಪಿಟ್‌ನಲ್ಲಿರುತ್ತದೆ. ಇದು ವಾತಾವರಣದ ಸ್ಥಿತಿಗತಿಗಳನ್ನು ದಾಖಲು ಮಾಡುತ್ತದೆ.

ಬ್ಲ್ಯಾಕ್ ಬಾಕ್ಸ್ ಉಪಯೋಗ ಏನು?
ಬ್ಲ್ಯಾಕ್ ಬಾಕ್ಸ್ ಎಲ್ಲಾ ದತ್ತಾಂಶಗಳನ್ನು ದಾಖಲು ಮಾಡಿಕೊಂಡಿರುವುದರಿAದ ದುರ್ಘಟನೆಗಳು ನಡೆದಾಗ ನಿಖರ ಕಾರಣ ಕಂಡು ಹಿಡಿಯಲು ಇದು ಉಪಯೋಗಕ್ಕೆ ಬರುತ್ತದೆ. ಅವಘಡದ ಅಂತಿಮ ಕ್ಷಣದವರೆಗಿನ ದಾಖಲಾತಿ ಇಲ್ಲಿರುವುದರಿಂದ ಅಂತಿಮ ಕ್ಷಣದಲ್ಲಿ ಏನಾಗಿತ್ತು ಎಂದು ತಿಳಿಯಬಹುದಾಗಿದೆ.

ಬ್ಲ್ಯಾಕ್ ಬಾಕ್ಸ್ ಹಾನಿಗೊಳಗಾಗುವುದಿಲ್ಲವೇ?
ಬ್ಲ್ಯಾಕ್ ಬಾಕ್ಸ್ ಮೇಲ್ಪದರವನ್ನು ಯಾವುದೇ ದುರ್ಘಟನೆಗೆ ನಾಶವಾಗದ ಹಾಗೆ ಸಿದ್ದಪಡಿಸಲಾಗುತ್ತದೆ. ೧೦೦ ಡಿಗ್ರಿ ಸೆಲ್ಸಿಯಸ್ ಉಷ್ಣವನ್ನೂ ಇದು ತಡೆದುಕೊಳ್ಳಬಲ್ಲದು. ಅಷ್ಟು ಗಟ್ಟಿಯಾದ ಸ್ಟೀಲ್ ಕವಚವನ್ನು ಇದರಲ್ಲಿ ಉಪಯೋಗಿಸಲಾಗುತ್ತದೆ.

ಮಾಹಿತಿಯನ್ನು ಹೇಗೆ ಅರ್ಥೈಸಿಕೊಳ್ಳಲಾಗುತ್ತದೆ?
ಬ್ಲ್ಯಾಕ್ ಬಾಕ್ಸ್ ಡ್ಯಾಮೇಜ್ ಆಗದೇ ಇದ್ದ ಪಕ್ಷದಲ್ಲಿ ಬ್ಲ್ಯಾಕ್ ಬಾಕ್ಸ್ ಮಿಲ್ಕಿಂಗ್ ಡಿವೈಸ್ ಅನ್ನು ಬಳಕೆ ಮಾಡಲಾಗುತ್ತದೆ. ಬ್ಲಾö್ಯಕ್ ಬಾಕ್ಸ್ನಲ್ಲಿ ಪ್ರಮುಖವಾಗಿ ಕಾರ್ಡುಗಳಿರುತ್ತದೆ. ಈ ಕಾರ್ಡುಗಳನ್ನು ಹೊರತೆಗೆದು ಮಿಲ್ಕಿಂಗ್ ಡಿವೈಸ್‌ಗೆ ಅಳವಡಿಸಿ ಅದರಲ್ಲಿರುವ ಮಾಹಿತಿಯನ್ನು ಹೊರತೆಗೆಯಲಾಗುತ್ತದೆ. ಪ್ರಿಂಟ್ ಔಟ್ ಮಾದರಿಯಲ್ಲಿ ಸಿಗುವ ಡೇಟಾಗಳಿಂದ ಹಲವು ಮಾಹಿತಿಗಳನ್ನು ಪತ್ತೆಹಚ್ಚಲಾಗುತ್ತದೆ. ಅಂತಿಮ ಕ್ಷಣದಲ್ಲಿ ಇಂಜಿನ್ನ ಕಾರ್ಯಕ್ಷಮತೆ, ವಿಮಾನ ಹಾರುತ್ತಿದ್ದ ಎತ್ತರ, ಹಾರುತ್ತಿದ್ದ ವೇಗ ಇತ್ಯಾದಿಗಳ ಬಗ್ಗೆ ಮಾಹಿತಿ ಇರುವುದರಿಂದ ಹೇಗೆ ಅವಘಡ ಸಂಭವಿಸುತ್ತದೆ ಎಂದು ತಿಳಿದುಬರುತ್ತದೆ.

ಸೇನಾ ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ಈಗಾಗಲೇ ಸಿಕ್ಕಿದ್ದು ಈ ದುರ್ಘಟನೆಗೆ ಕಾರಣ ಏನೆಂದು ಸದ್ಯದಲ್ಲೇ ತಿಳಿದು ಬರಲಿದೆ. ದೇಶದ ಜನತೆಯಲ್ಲಿ ಎದ್ದಿರುವ ಅನೇಕ ಪ್ರಶ್ನೆಗಳಿಗೆ ಶಿಘ್ರದಲ್ಲೇ ಉತ್ತರ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top