fbpx
ಸಮಾಚಾರ

“ಮೊಟ್ಟೆ ತಿನ್ನುವವರಿಂದ ಮಠಗಳು ಕಾಣಿಕೆ ಸ್ವೀಕರಿಸಬಾರದು” ಆಗ್ರಹ

‘ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವ ಮಠಾಧೀಶರು, ಮೊಟ್ಟೆ ತಿನ್ನುವ ಭಕ್ತರಿಂದ ಕಾಣಿಕೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬಾರದು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದರು.

“ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವ ಮಠಾಧೀಶರು, ಮೊಟ್ಟೆ ತಿನ್ನುವ ಭಕ್ತರಿಂದ ಕಾಣಿಕೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬಾರದು. ಮೊಟ್ಟೆ ಸೇವಿಸುವವರು ಕಾಣಿಕೆ ನೀಡಬಾರದು ಎಂದು ಮಠಗಳಲ್ಲಿ ಮೊದಲು ಫಲಕ ಅಳವಡಿಸಬೇಕು. ಮೊಟ್ಟೆ ಸೇವಿಸುವವರು ಹಾಗೂ ಮಾರುವವರ ಕಾಣಿಕೆಗಳನ್ನು ಪಡೆಯುವ ಮಠಗಳು, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವುದು ಸರಿಯಲ್ಲ. ಅಂಥ ಸ್ವಾಮೀಜಿಗಳು ಮಠಾಧೀಶರಾಗಲು ನಾಲಾಯಕ್. ” ಎಂದರು.

“ಮೊಟ್ಟೆ ನೀಡುವುದನ್ನು ವಿರೋಧಿಸಿ ಕೆಲವು ಮಠಾಧೀಶರು ಸಮಾವೇಶ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಈ ರೀತಿ ರಾಜಕಾರಣ ಮಾಡುತ್ತಿರುವ ಮಠಾಧೀಶರು ಮೊದಲು ತಮ್ಮ ಕಾವಿ ಕಳಚಿ ನಂತರ ರಾಜಕಾರಣ ಮಾಡಲಿ. ನಾವು ಕಟ್ಟಿದ ತೆರಿಗೆ ಹಣವನ್ನು ನಿಮ್ಮ ಮಠಗಳ ಅಭಿವೃದ್ಧಿಗೆ, ನಿಮ್ಮ ಅಭಿವೃದ್ಧಿಗೆ, ನಿಮಗೆ ಮೋಜು ಮಾಡೋಕೆ ಅನುದಾನ ನೀಡುತ್ತಿದ್ದಾರೆ. ಮಠಾಧೀಶರುಗಳಿಗೆ ಮಾನ ಮರ್ಯಾದೆ ಇದ್ದರೆ ನಾವು ತೆರಿಗೆ ಕಟ್ಟಿದ ಆ ಅನುದಾನವನ್ನು ವಾಪಸ್ ನೀಡಲಿ’’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top