fbpx
ಸಮಾಚಾರ

ವಿದ್ಯೆ ಕಲಿಸಿದ ಗುರುಗಳ ತಲೆಗೇ ಕಸ ತಂದು ಸುರಿದ ಹೈಸ್ಕೂಲ್ ವಿದ್ಯಾರ್ಥಿಗಳು…!

ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತು ಹಳೆಯದಾಯಿತು. ಕೋಲು ಹಿಡಿದು ಬರುವ ದಪ್ಪ ಮೀಸೆಯ ಮೇಸ್ತರರನ್ನು ಕಂಡರೆ ಭಯಬೀಳುವ ವಿದ್ಯಾರ್ಥಿ ವರ್ಗವೂ ಈಗ ಉಳಿದಿಲ್ಲ. ಶಿಕ್ಷೆಯೇ ಶಿಕ್ಷಣವಲ್ಲ ಎಂಬ ಪರಿಕಲ್ಪನೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಬರುತ್ತಲೇ ಇದೆ. ಈ ಬದಲಾವಣೆಯ ಮಟ್ಟ ಮುಟ್ಟಿರುವ ರೀತಿಯನ್ನು ಕಂಡರೆ ಒಂದಿಷ್ಟು ಬೇಸರವೂ ಆಗುತ್ತದೆ. ಇದಕ್ಕೆ ಪೂರಕವೆಂಬAತೆ ಇತ್ತೀಚೆಗೆ ವೈರಲ್ ಆದ ವಿಡಿಯೋ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕಸದ ಬುಟ್ಟಿ ಹಾಕಿ ಪುಂಡಾಟ ಮೆರೆದ ವಿಡಿಯೋವದು. ಅಸಲಿಗೆ ನಮ್ಮ ಕರ್ನಾಟಕದಲ್ಲೇ ಇಂತಹದ್ದೊAದು ಘಟನೆ ನಡೆದಿದೆ ಅನ್ನೋದು ತಲೆತಗ್ಗಿಸುವ ವಿಚಾರ. ಅಷ್ಟಕ್ಕೂ ಇದನ್ನು ಮಾಡಿರುವವರು ಕಾಲೇಜು ಯುವಕರಲ್ಲ. ಇನ್ನೂ ಮೀಸೆ ಚಿಗುರದ ಹೈಸ್ಕೂಲು ಹುಡುಗರು..!

 

 

ಏನಿದು ಘಟನೆ?
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿರುವ ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಪ್ರಕಾಶ್ ಬೋಗರ್ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ತರಗತಿ ನಡೆಸುತ್ತಿರುವಾಗ ಒಂದಿಷ್ಟು ವಿದ್ಯಾರ್ಥಿಗಳು ಅವರ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯನ್ನು ಅದ್ಯಾಪಕರ ತಲೆ ಮೇಲೆ ಸುರಿದಿದ್ದಾರೆ. ಇದ್ಯಾವುದಕ್ಕೂ ಪ್ರತಿಕ್ರಿಯಿಸದ ಮೇಸ್ಟರು ತಮ್ಮ ಪಾಠ ಮುಂದುವರೆಸಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿಗಳು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದೆಂದು ಮೇಸ್ತರು ಸುಮ್ಮನಿದ್ದರೆ ಊರಿನ ಜನ ಮತ್ತು ಶಿಕ್ಷಕರ ಸಮುದಾಯವನ್ನು ವೈರಲ್ ವಿಡಿಯೋ ಆಕ್ರೋಶಗೊಳ್ಳುವಂತೆ ಮಾಡಿದೆ. ಇದೀಗ ಊರವರ ಮತ್ತು ಶಿಕ್ಷಕರ ಸಮುದಾಯದಿಂದ ೬ ಜನ ಉದ್ದಟತನ ತೋರಿ ಪುಂಡಾಟಿಕೆ ಮೆರೆದ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಓರ್ವ ಹುಡುಗನನ್ನು ಹಿಡಿದು ಮೇಸ್ಟç ಕಾಲಿಗೆ ಬೀಳಿಸಿ ಕ್ಷಮಾಪಣೆಯನ್ನೂ ಕೇಳಿಸಲಾಗಿದೆ. ಆ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು ತಪ್ಪತಸ್ಥ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆಂದು ಚನ್ನಗಿರಿ ಪೋಲಿಸರು ಆಶ್ವಾಸನೆ ನೀಡಿದ್ದಾರಂತೆ.

ಏನೇ ಆಗಲಿ ವಿದ್ಯೆ ಕಲಿಸಿದ ಗುರುಗಳು ದೇವರಿಗೆ ಸಮ. ಆ ದೇವರ ಮೇಲೆ ಕೈ ಎತ್ತುವುದೂ ಒಂದೇ. ಪಾಳು ಬಾವಿಗೆ ಬೀಳುವುದೂ ಒಂದೇ. ಈ ಘಟನೆಯ ಬಗ್ಗೆ ಓದಿದವರಾದರೂ ಮಕ್ಕಳಿಗೆ ಇನ್ನು ಮುಂದೆ ಮನೆಯಿಂದಲೇ ಸಂಸ್ಕಾರಗಳನ್ನು ಕಲಿಸುವಂತಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top