fbpx
ಸಮಾಚಾರ

ಪ್ರಧಾನಿ ನರೇಂದ್ರ ಮೋದಿ ಖಾತೆಗೆ ಕನ್ನ ಹಾಕಿದ ಕಿಡಿಗೇಡಿಗಳು

ಈಚೆಗೆ ಸೆಲೆಬ್ರಿಟಿಗಳ/ ಗಣ್ಯರ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ದಾಖಲೆ ಹಲವು ದೇಶದ ನಾಯಕರ ಟ್ವಿಟರ್ ಖಾತೆಗಳು ಹ್ಯಾಕ್ ಆದ ಬೆನ್ನಲ್ಲೇ ದುಷ್ಕರ್ಮಿಗಳು ಇಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಮೇಲೆ ವಕ್ರದೃಷ್ಟಿ ಬೀರಿದ್ದಾರೆ.. ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಟ್ವಿಟರ್​ ಖಾತೆ ಇಂದು ಹ್ಯಾಕ್​ ಆಗಿದೆ. ಕಿಡಿಗೇಡಿಗಳಿಂದ ಕೆಲ ಹೊತ್ತು ಪ್ರಧಾನಿ ಅವರ ಖಾತೆ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ಸರಿಪಡಿಸಲಾಯಿತು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

 

 

ಖಾತೆಯನ್ನು ಮರುಸ್ಥಾಪಿಸುವ ಮೊದಲು, “ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ (Bitcoin) ಅನ್ನು ಕಾನೂನುಬದ್ಧವಾಗಿ ಅಳವಡಿಸಿಕೊಂಡಿದೆ. ಸರ್ಕಾರವು ಅಧಿಕೃತವಾಗಿ 500 BTC ಯನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ” ಎಂದು ನಮೂದಿಸಿದ ಟ್ವೀಟ್ ಅನ್ನು PM ಮೋದಿ ಅವರ ಟೈಮ್‌ಲೈನ್‌ನಲ್ಲಿ URL ನೊಂದಿಗೆ ಹಂಚಿಕೊಳ್ಳಲಾಗಿದೆ. ರಾತ್ರಿ ಸುಮಾರು 2 ಗಂಟೆಗೆ ಈ ಟ್ವೀಟ್‌ ಮಾಡಲಾಗಿದ್ದು ಬಿಟ್‌ಕಾಯಿನ್ ಅನ್ನು ಭಾರತ ಅಧಿಕೃತಗೊಳಿಸಿರುವ ಬಗ್ಗೆ ತಿಳಿಸಿ “The Future Has Come Today!” ಎಂದು ಬರೆಯಲಾಗಿದೆ.

 

 

ಸ್ವತಃ ಪ್ರಧಾನಿಯವರ ಟ್ವೀಟ್ ಖಾತೆಯಿಂದ ಇದು ಪೋಸ್ಟ್ ಆಗಿದೆ ಎಂದರೆ ಕೇಳಬೇಕೆ ಕೆಲವೇ ನಿಮಿಷಗಳಲ್ಲಿ ಸುದ್ದಿಯಾಯಿತು. ಹಲವರಿಗೆ ಇದರ ಬಗ್ಗೆ ಅನುಮಾನ ವ್ಯಕ್ತವಾಗಿ ಬಹುಶಃ ಹ್ಯಾಕ್ ಆಗಿರಬೇಕು ಎಂದು ಭಾವಿಸಿದರು. ಇನ್ನು ಕೆಲವರು, 500 ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಇತ್ತೀಚೆಗೆ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಹಲವು ಅಚಾನಕ್ ಘೋಷಣೆಗಳನ್ನು ಮಾಡಿದ ಪ್ರಧಾನಿಯವರು ಒಂದು ವೇಳೆ ಬಿಟ್ ಕಾಯಿನ್ ನ್ನು ದೇಶದಲ್ಲಿ ಕಾನೂನುಬದ್ಧಗೊಳಿಸಿರಲೂಬಹುದು ಎಂದು ಭಾವಿಸಿದರು.

ಇದಾಗಿ ಒಂದೇ ಗಂಟೆಗಳಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರತಿಕ್ರಿಯೆ ನೀಡಿ ಪ್ರಧಾನಿಯವರ ಟ್ವೀಟ್ ಖಾತೆ ಹ್ಯಾಕ್ ಆಗಿತ್ತು, ಈಗ ಸರಿಯಾಗಿದೆ, ಆಗ ಮಾಡಿದ್ದ ಟ್ವೀಟ್ ಗಳೆಲ್ಲ ನಿಜವಲ್ಲ ಎಂದು ಸ್ಪಷ್ಟನೆ ನೀಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top