fbpx
ಸಮಾಚಾರ

ಅಪ್ಪು ನಟಿಸಬೇಕಿದ್ದ ‘ಆ’ ಚಿತ್ರಕ್ಕೆ ಯುವರಾಜ್ ಹೀರೋ?

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದರು. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಪುನೀತ್ 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿಬಿಟ್ಟರು. ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡಿಗರಿಗೆ ದಿಗ್ಭ್ರಮೆಯಾಗಿದೆ.

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಅವರ ಸಿನಿಮಾಗಳು ಅರ್ಧಕ್ಕೆ ನಿಂತು ಹೋಗಿದೆ. ‘ಜೇಮ್ಸ್’ ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ‘ದ್ವಿತ್ವ’ ಸಿನಿಮಾ ಸೆಟ್ಟೇರಬೇಕಿತ್ತು. ಸಂತೋಷ್ ಆನಂದ್‌ರಾಮ್ ಮತ್ತು ಕೃಷ್ಣ ನಿರ್ದೇಶನದ ಚಿತ್ರಗಳಲ್ಲಿ ಅಪ್ಪು ನಟಿಸಬೇಕಿತ್ತು. ಇದೆಲ್ಲ ಆಗುವ ಮುನ್ನವೇ ಪುನೀತ್ ರಾಜ್‌ಕುಮಾರ್ ಅವರು ವಿಧಿಯಾತಕ್ಕೆ ಸಿಲುಕಿ ಮರೆಯಾದರು. ಹೀಗಾಗಿ, ಅಪ್ಪುಗಾಗಿ ರೆಡಿ ಮಾಡಿದ್ದ ಚಿತ್ರಕಥೆಗಳು ಇದೀಗ ಹೀರೋ ಇಲ್ಲದೆ ಅನಾಥವಾಗಿದೆ.

ಈ ಮದ್ಯೆ ಅಪ್ಪು ಮಾಡಬೇಕಿದ್ದ ಒಂದು ಸಿನಿಮಾ ಅವರ ಅಣ್ಣ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ನಾಯಕನಾಗಿ ನಟಿಸುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿವೆ,. ಹೌದು, ರಾಜಕುಮಾರ ಮತ್ತು ಯುವರತ್ನ ಚಿತ್ರಗಳ ನಂತರ ಮತ್ತೊಮ್ಮೆ ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆಗೆ ಪುನೀತ್ ಚಿತ್ರ ಮಾಡಬೇಕಿತ್ತಲ್ಲಾ, ಆ ಚಿತ್ರದಲ್ಲಿ ಯುವರಾಜ್ ರಾಜಕುಮಾರ್ ನಾಯಕನಾಗಿ ನಟಿಸಲಿದ್ದಾರೆ ಎಂಬ ಗುಸು ಗುಸು ಕೇಳಲಾರಂಭಿಸಿದೆ. ಜನವರಿ ತಿಂಗಳ ಕೊನೆಯಲ್ಲಿ ಸಿನಿಮಾ ಸೆಟ್ಟೇರುತ್ತದೆ ಎಂಬ ಕನ್ನಡ ಮಾಧ್ಯಮವೊಂದು ವರದಿಮಾಡಿದೆ. ಆದರೆ ಈ ಬಗ್ಗೆ ಸಂತೋಷ್ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.

ಅಪ್ಪು- ಸಂತೋಷ್ ಕಾಂಬಿನೇಷನ್ ನ ಮೂರನೇ ಚಿತ್ರವನ್ನು ರಾಜಕುಮಾರ್, ಯುವರತ್ನ ನಿರ್ಮಿಸಿದ್ದ ಹೊಂಬಾಳೆ ಸಂಸ್ಥೆಯೇ ನಿರ್ಮಾಣ ಮಾಡಬೇಕಿತ್ತು.. ಒಂದು ವೇಳೆ ಅಪ್ಪು ಜಾಗದಲ್ಲಿ ಯುವರಾಜ್ ನಟಿಸಿದರೆ ಹೊಂಬಾಳೆಯವರೇ ನಿರ್ಮಾಣ ಮಾಡುತ್ತಾರೆಯೇ? ಅಥವಾ ನಿರ್ಮಾಪಕರು ಬದಲಾಗುತ್ತದೆಯೇ? ಅಷ್ಟಕ್ಕೂ ಅಪ್ಪು ಮಾಡಬೇಕಿದ್ದ ಸಿನಿಮಾವನ್ನು ಯುವರಾಜ್ ಮಾಡುತ್ತಾರೆಯೇ? ಎಂಬಂತ ಹಲವಾರು ಪ್ರಶ್ನೆಗಳು ನಮ್ಮ ಬಳಿ ಇದ್ದು ಅವಕ್ಕೆಲ್ಲ ಕಾಲವೇ ಉತ್ತರ ನೀಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top