fbpx
ಮನೋರಂಜನೆ

‘ಪುಷ್ಪ’ ಐಟಂ ಹಾಡಿನ ವಿರುದ್ಧ ದೂರು ದಾಖಲು: ಕಾರಣ ವಿಚಿತ್ರ!

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಹಾಡುಗಳು, ಟೀಸರ್, ಟ್ರೈಲರ್‌ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿದೆ ‘ಪುಷ್ಪ’ ಸಿನಿಮಾ. ಈ ಮಧ್ಯೆ ಚಿತ್ರದ ಒಂದು ಹಾಡು ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಅದು ಸಮಂತಾ ಹೆಜ್ಜೆ ಹಾಕಿರುವ ‘ಹೂ ಅಂತೀಯಾ ಹೂಹೂ ಅಂತೀಯಾ’ ಹಾಡು. ಇದೀಗ ಈ ಹಾಡು ಹಿಟ್ ಆಗುವುದರ ಜೊತೆಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಮದ್ಯೆ ಹಾಡಿನ ವಿರುದ್ಧ ಆರೋಪವೊಂದು ಕೇಳಿಬಂದಿದೆ.

ಹಾಡಿನಲ್ಲಿ ಗಂಡಸರ ಕುರಿತು ಸಾಹಿತ್ಯ ಬರೆಯಲಾಗಿದೆ. ಹುಡುಗಿಯರನ್ನು ನೋಡಿದಾಗ ಗಂಡಸರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಗಂಡಸರೆಲ್ಲರೂ ಕಾಮುಕ ಬುದ್ಧಿಯವರು ಎಂಬರ್ಥ ಬರುವ ರೀತಿಯಲ್ಲಿ ಈ ಹಾಡಿನ ಸಾಹಿತ್ಯ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಹಾಗಾಗಿ, ಆಂಧ್ರ ಪ್ರದೇಶದಲ್ಲಿ ಪುರುಷರ ಸಂಘಟನೆಯೊಂದು ‘ಪುಷ್ಪ’ ಚಿತ್ರತಂಡದ ವಿರುದ್ಧ ಕೇಸ್​ ದಾಖಲಿಸಿದೆ.

ಆಂಧ್ರ ಪ್ರದೇಶದ ಪುರುಷರ ಸಂಘದವರು ಕೋರ್ಟ್ ಮೆಟ್ಟಿಲೇರಿದ್ದು, ಈ ಹಾಡನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಾಡಿನಲ್ಲಿ ಪುರುಷರು ಹೆಚ್ಚಿನ ಲೈಂಗಿಕ ಆಸಕ್ತಿ ಉಳ್ಳವರು ಎಂಬಂತೆ ಬಿಂಬಿಸಲಾಗಿದೆ. ಹಾಡಿನ ಸಾಹಿತ್ಯದಲ್ಲಿ ಇದು ಪದೇ ಪದೇ ಬಿಂಬಿತವಾಗಿದೆ. ಈ ಹಾಡಿನಲ್ಲಿ ‘ಸೀರೆ ತೊಟ್ಟರೂ, ಶಾರ್ಟ್ ತೊಟ್ಟರೂ, ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು’ ‘ಗಂಡಸರ ಬುದ್ದಿಯೇ ನೀಚ’ ಎಂಬ ಅರ್ಥದ ಸಾಲುಗಳು ಬರುತ್ತವೆ. ಇದರ ವಿರುದ್ಧ ಪುರುಷರ ಸಂಘದವರು ಗರಂ ಆಗಿದ್ದಾರೆ.

ಅಂದಹಾಗೆ ‘ಪುಷ್ಪ’ ಸಿನಿಮಾ ಇದೇ ಡಿಸೆಂಬರ್ 17 ರಂದು ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top