fbpx
ಸಮಾಚಾರ

ಅಂದು ಆಡಿ ಕಾರಿನಲ್ಲಿ ಬಂದು ಇಂದು ಸೋತು ಆಟೋ ಹತ್ತಿದ ಕೆಜಿಎಫ್ ಬಾಬು

ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಎಚ್.ಎಸ್.ಗೋಪಿನಾಥ್ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಯೂಸೂಫ್ ಷರೀಫ್ (ಕೆಜಿಎಫ್ ಬಾಬು) ಕಣದಲ್ಲಿದ್ದರು. ಹೀನಾಯ ಸೋಲು ಕಂಡ ಕೆಜಿಎಫ್ ಬಾಬು ಆಟೋ ಹತ್ತಿ ಮನೆಗೆ ತೆರಳಿದರು.

1,277 ಮತಗಳ ಅಂತರದಿಂದ ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದು, ಕೆಜಿಎಫ್ ಬಾಬು ಸೋಲನುಭವಿಸಿದ್ದಾರೆ. ಇವರು 830 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಒಟ್ಟು 2057 ಮತಗಳು ಚಲಾವಣೆಯಾಗಿದ್ದು, 13 ಮತಗಳು ತಿರಸ್ಕೃತಗೊಂಡಿವೆ.

ನಾಮಪತ್ರ ಸಲ್ಲಿಕೆ ವೇಳೆ ಐಷರಾಮಿ ಕಾರಲ್ಲಿ (ಆಡಿ ಕಾರು) ಬಂದಿದ್ದ ಕೆಜಿಎಫ್ ಬಾಬು, ಸೋಲಿನ ನಂತರ ಯಾರ ಬಳಿಯೂ ಮಾತನಾಡದೇ ಕೈ ಮುಗಿದು ಆಟೋ ಹತ್ತಿ ತೆರಳಿದರು. ಬೆಂಬಲಿಗರು, ಕಾರ್ಯಕರ್ತರು ಯಾರೂ ಇಲ್ಲದೇ ಒಬ್ಬಂಟಿಯಾಗಿ ತೆರಳಿದರು.

ಸದ್ಯ ಕೊಡಗು, ದಾವಣಗೆರೆಯಲ್ಲಿ ಸೇರಿದಂತೆ ಸುಮಾರು 10ಕ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಅಧಿಕೃತ ಘೋಷಣೆ ಹೊರ ಬೀಳಬೇಕಿದೆ. ಇನ್ನೂ ಹಾಸನದಲ್ಲಿ ಸೂರಜ್ ರೇವಣ್ಣ ಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top