fbpx
ಸಮಾಚಾರ

ಇಲ್ಲಿದೆ ರಾಯನ್​​ ರಾಜ್​ ಸರ್ಜಾ ಗೆಳೆಯರ ಫ್ರೆಂಡ್ಸ್​ ಗ್ಯಾಂಗ್​ ಫೋಟೋ

ರಾಯನ್​ ರಾಜ್​ ಸರ್ಜಾ ಆಗಮನದ ಬಳಿಕ ಮೇಘನಾ ರಾಜ್​ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಪುತ್ರನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರು ತಮ್ಮ ಮಗ ರಾಯನ್ ರಾಜ್ ಸರ್ಜಾ ಫೋಟೋವನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈಗ ರಾಯನ್​​ ರಾಜ್​ ಸರ್ಜಾ ಗೆಳೆಯರ ಜೋತೆ ಇದ್ದ ಮುದ್ದಾದ ಫೋಟೋವನ್ನು ಮೇಘನಾ ಅಪ್ಲೋಡ್ ಮಾಡಿದ್ದಾರೆ.

 

 

ಗೆಳೆಯನ ಬರ್ತ್​ಡೇ ಪಾರ್ಟಿಯಲ್ಲಿ ರಾಯನ್​ ರಾಜ್​ ಸರ್ಜಾ ಭಾಗವಹಿಸಿದ್ದಾನೆ. ಫ್ರೆಂಡ್ಸ್​ ಜತೆ ಸೇರಿ​ ಆಟ ಕೂಡ ಆಡಿದ್ದಾನೆ. ಈ ಸಂದರ್ಭದಲ್ಲಿ ಮೇಘನಾ ರಾಜ್​ ಅವರು ರಾಯನ್​ ರಾಜ್​ ಸರ್ಜಾನ ಕೆಲವು ಫೋಟೋಗಳನ್ನು ತೆಗ್ದಿದ್ದರೆ .

 

 

ಇನ್​ಸ್ಟಾಗ್ರಾಮ್​ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಲೈಕ್​ ಮಾಡಿದ್ದಾರೆ. ಪ್ರತಿ ಫೋಟೋವಿನಲ್ಲಿ ರಾಯನ್​ ರಾಜ್​ ಸರ್ಜಾ ಸಖತ್​ ಕ್ಯೂಟ್​ ಆಗಿ ಕಾಣುತ್ತಿದ್ದಾನೆ. ಹಾಗೆ ಹುಟ್ಟುಹಬ್ಬದ ಶುಭಾಶಯಗಳು “ಧಕ್ಷ್” ಎಂದು ಮೇಘನಾ ರಾಜ್ ಶುಭಾಶಯ ಹೇಳಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಹಾಗೆಯೇ ಮಕ್ಕಳನ್ನು ಪೋಸ್ ಕೊಡುವಂತೆ ಮಾಡುವುದು ತುಂಬಾ ಕಷ್ಟ ಆದರೆ ಅದು ತಾಯಂದಿರಿಗೆ ತುಂಬಾನೇ ಇಷ್ಟ. ಈ ಮಾತನ್ನು ತಾಯಂದಿರೆಲ್ಲ ಒಪ್ಪುತ್ತೀರಾ ಅಲ್ವ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ.

 

 

View this post on Instagram

 

A post shared by Meghana Raj Sarja (@megsraj)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top