fbpx
ಸಮಾಚಾರ

ನಟಿ ಸಮಂತಾ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ

ಖ್ಯಾತ ನಟಿ ಸಮಂತಾ ಅವರು ದಿಢೀರ್ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸಮಂತಾ ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಸಿನಿಮಾವೊಂದರ ಚಿತ್ರೀಕರಣಕ್ಕೆಂದು ನಟಿ ಸಮಂತಾ ಇತ್ತೀಚೆಗೆ ಕಡಪಾಗೆ ತೆರಳಿದ್ದರು. ಸೋಮವಾರ ವಾಪಸ್​ ಆದ ಬಳಿಕ ನಟಿಗೆ ಸುಸ್ತು ಜೊತೆಗೆ ಶೀತ ಜ್ವರ ಕಾಣಿಸಿಕೊಂಡಿದೆ. ಇದರಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಟಾಲಿವುಡ್​ ನಟಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ

ಸಮಂತಾ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿದ್ದು, ಇದಕ್ಕಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅಭಿಮಾನಿಗಳು ತೀವ್ರವಾಗಿ ಆತಂಕಗೊಂಡಿದ್ದರು. ಇದರ ಜತೆಗೆ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದೆ ಎಂದೂ ಹೇಳಲಾಗಿತ್ತು. ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ. ರೂಪಾಂತರಿಗಳು ಪತ್ತೆ ಆಗುತ್ತಿವೆ. ಹೀಗಿರುವಾಗಲೇ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದ್ದು ಹೀಗಾಗಿ, ಸಮಂತಾಗೆ ಕೊವಿಡ್​ ಅಂಟಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು.

ಈ ಕುರಿತು ಸದ್ಯ ಅವರ ಮ್ಯಾನೇಜರ್​ ಮಹೇಂದ್ರ ಸ್ಪಷ್ಟನೆ ನಿಡಿದ್ದು ‘ಸಮಂತಾ ಕಳೆದ ಕೆಲವು ದಿನಗಳಿಂದ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top