fbpx
ಸಮಾಚಾರ

“ನಾನು ಪುನೀತ್ ರಾಜಕುಮಾರ್ ಮನೆಗೆ ಹೋಗಲ್ಲ” ಅಲ್ಲೂ ಅರ್ಜುನ್ ಹೀಗೆ ಹೇಳಿದ್ದು ಏಕೆ?

ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾ ಡಿಸೆಂಬರ್​ 17ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಸಿನಿಮಾ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ‘ಪುಷ್ಪ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಚಿತ್ರತಂಡ ಬಂದಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​ ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಲೂ ಅರ್ಜುನ್ ಅವರು “ಇಂದು ನಾನು ಪುನೀತ್ ರಾಜಕುಮಾರ್ ಅವರ ಮನೆಗೆ ಹೋಗುತ್ತಿಲ್ಲ” ಎಂದು ಹೇಳಿದರು. ಅಷ್ಟಕ್ಕೂ ಅಲ್ಲೂ ಅರ್ಜುನ್ ಅವರು ಈ ರೀತಿ ಹೇಳಿದ್ದು ಯಾಕೆ ಅಂತೀರಾ? ಮುಂದೆ ಓದಿ.

ಪುನೀತ್ ರಾಜಕುಮಾರ್ ನಿಧನವಾದಾಗ ಅನೇಕ ಹೊರ ರಾಜ್ಯದ ಸ್ಟಾರ್ ಗಳು ಬಂದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಇನ್ನು ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಸಿನಿಮಾ ಮಂದಿ ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಈವರೆಗೆ ಅಲ್ಲು ಅರ್ಜುನ್ ಅವರು ಮಾತ್ರ ಪುನೀತ್ ಮನೆಗೆ ತೆರಳಿಲ್ಲ. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಪುನೀತ್​ ನಿವಾಸಕ್ಕೆ ತೆರಳಿ ಎಂದು ಅಲ್ಲು ಅರ್ಜುನ್​ ಎದುರು ಬೇಡಿಕೆ ಇಟ್ಟಿದ್ದರು. ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ಎಲ್ಲ ವಿಚಾರಗಳಿಗೂ ಸ್ಪಷ್ಟನೆ ನೀಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪ ಇದೆ. ‘ಪುಷ್ಪ’ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಇದು ಸೂಪರ್​ ಎಂದು ಹೇಳುವಂತಹ ವಿಚಾರ ಅಲ್ಲ. ಅದು ನನ್ನ ಕರ್ತವ್ಯ’ ಎಂದರು ಅಲ್ಲು ಅರ್ಜುನ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top